Jehadi Wall Writing at Mangaluru | ಜಿಹಾದಿ ಗೋಡೆ ಬರಹ: ವಿಕೃತಿ ಮೆರೆದವರ ವಿರುದ್ದ ಕಠಿಣ ಕ್ರಮಕ್ಕೆ ಎಬಿವಿಪಿ ಆಗ್ರಹ
ಮಂಗಳೂರು ನಗರದ ಅಪಾರ್ಟ್‍ಮೆಂಟ್ ಕಂಪೌಂಡ್ ಮೇಲೆ ದೇಶದ್ರೋಹಿ ಮತ್ತು ಉಗ್ರ ಸಂಘಟನೆಗಳ ಪರ ಗೋಡೆ ಬರಹ ಬರೆದಿರುವುದು 3 ದಿನಗಳ ಹಿಂದೆ ಅಷ್ಟೇ ಕಂಡು ಬಂದಿತ್ತು, ಈ ಘಟನೆಯನ್ನು ವಿರೋಧಿಸಿ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿತ್ತು ಹಾಗೂ ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದು ಕೊಳ್ಳುವಂತೆ ಆಗ್ರಹಿಸಿತ್ತು.
ಆದರೆ ಅದೇ ರೀತಿಯ ಘಟನೆ ಇಂದು ಮತ್ತೆ ಬೆಳಕಿಗೆ ಬಂದಿದೆ. ಜಿಲ್ಲಾ ನ್ಯಾಯಲಯದ ಆವರಣದ ಹಳೆಯ ಕಟ್ಟಡದ ಗೋಡೆಯ ಮೇಲೆ ಮತಾಂಧ ಗೋಡೆಬರಹದ ಮೂಲಕ ಜಿಹಾದಿಗಳು ವಿಕೃತಿ ಮೆರೆದಿದ್ದಾರೆ, ಈ ರೀತಿಯ ಗೋಡೆಬರಹದಿಂದ ಮಂಗಳೂರು ನಗರದಲ್ಲಿ ಅರಾಜಕತೆ ತಾಂಡವ ಆಡುತ್ತಿದ್ದು , ಇದೊಂದು ಶಾಂತಿಯನ್ನು ಕೆಡಿಸುವ, ಜನರ ಭಾವನೆಗಳಿಗೆ ಧಕ್ಕೆ ತರುವಂತ ಕೃತ್ಯವಾಗಿದೆ ಎಂದು ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ಹಾಗೂ ಪೊಲೀಸ್ ಇಲಾಖೆ ಸರಿಯಾದ ಕ್ರಮ ತೆಗೆದುಕೊಳ್ಳದೆ ಇರುವುದು ಈ ಘಟನೆ ಮರುಕಳಿಸಲು ಕಾರಣವಾಗಿದೆ .
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ , ಈ ಕೂಡಲೇ ಈ ಘಟನೆಯ ಹಿಂದಿರುವ ದೇಶದ್ರೋಹಿಗಳನ್ನು ಬಂಧಿಸದಿದ್ದಲ್ಲಿ , ವಿದ್ಯಾರ್ಥಿ ಪರಿಷತ್ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.