Annaiah Kulal | ಐಎಂಎ- ವೈದ್ಯ ಬರಹಗಾರರ ಬಳಗದ ರಾಜ್ಯ ಸಮಿತಿ ಅಧ್ಯಕ್ಷರಾಗಿ ಡಾ ಅಣ್ಣಯ್ಯ ಕುಲಾಲ್
ಮಂಗಳೂರು: ಪ್ರತಿಷ್ಠಿತ ರಾಜ್ಯ ಭಾರತೀಯ ವೈದ್ಯಕೀಯ ಸಂಘದ, ಐಎಂಎ ವೈದ್ಯ ಬರಹಗಾರರ ಸಮಿತಿಯ ಅಧ್ಯಕ್ಷರಾಗಿ ಸಾಹಿತಿ, ಸಂಘಟಕ, ವಿಮರ್ಶಕ ಹಾಗೂ ಚಿಂತಕ, ಮತ್ತು ವೈದ್ಯಕೀಯ ಶಿಕ್ಷಕರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನ ರಾಜ್ಯ ಐಎಂಎ ಕಾರ್ಯಕಾರಿಣಿಯಲ್ಲಿ ಸರ್ವಾನುಮತದಿಂದ ಆರಿಸಲಾಯಿತು.
ಐಎಂಎ ವೈದ್ಯಬರಹಗಾರರ ಬಳಗದ ಸ್ಥಾಪಕ ರೂವಾರಿಗಳಲ್ಲಿ ಓರ್ವರಾದ ಇವರು, ಚದುರಿ ಹೋಗಿದ್ದ ಐಎಂಎ ವೈದ್ಯ ಬರಹಗಾರರನ್ನ ಒಟ್ಟು ಮಾಡುವಲ್ಲಿ ಸತತ ಹಲವಾರು ವರ್ಷಗಳಿಂದ ಶ್ರಮಿಸಿದ್ದರು.ಗದಗ್ ನಲ್ಲಿ ಬಳಗ ಉದ್ಘಾಟನೆ ಆದ ಬಳಿಕ ಎರಡು ವರ್ಷ ಅದರ ಸಂಚಾಲಕರು ಆಗಿ ದುಡಿದಿದ್ದರು.
ಅಲ್ಲದೇ ಮಂಗಳೂರಿನಲ್ಲಿ ಅಭೂತ ಪೂರ್ವ ಚೊಚ್ಚಲ ಐಎಂಎ ವೈದ್ಯ ಬರಹಗಾರರ ಸಮ್ಮೇಳನ ನಡೆಸಿ ರಾಜ್ಯದ 200 ಕ್ಕೂ ಅಧಿಕ ಐಎಂಎ ವೈದ್ಯ ಸಾಹಿತಿಗಳನ್ನ ಒಂದೆಡೆ ಸೇರಿಸಿದ್ದರು..ಪ್ರತಿವರ್ಷ ಐಎಂಎ ಬಳಗದ ವತಿಯಿಂದ ವರ್ಷದ ಶ್ರೇಷ್ಠ ಐಎಂಎ ಸಾಹಿತಿ ಪ್ರಶಸ್ತಿ ಕೊಡುವಲ್ಲಿ ಅವರ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ಹಾಗೂ ಪ್ರಥ್ವಿ ಮಕ್ಕಳ ಆಸ್ಪತ್ರೆ ಬಳ್ಳಾರಿ ಮೂಲಕ ಪ್ರಾಯೋಜಕತ್ವ ಕೊಡಿಸಿದ್ದರು.
ಸತತವಾಗಿ 4/5 ವರ್ಷ ಗಳಿಂದ ಐಎಂಎ ವೈದ್ಯ ಬರಹಗಾರರ ಬಳಗದ ಅಡ್ಮಿನ್ ಆಗಿ ಸರ್ವರ ಪ್ರೀತಿ ಆಧರ ಗಳಿಸಿದ್ದರು.ಪ್ರಸ್ತುತ ಶ್ರೀನಿವಾಸ್ ವಿವಿ ಯ ಮುಖ್ಯ ವೈದ್ಯಾಧಿಕಾರಿ ಹಾಗೂ ಪ್ರೊಫೆಸರ್ ಆಗಿರುವ ಇವರು ನಗರದ ಖ್ಯಾತ ಕುಲಾಲ್ ಹೆಲ್ತ್ ಸೆಂಟರ್ ನಲ್ಲಿ ಕುಟುಂಬ ವೈದ್ಯ ಹಾಗೂ ಅರೋಗ್ಯ ಸಲಹಾ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.