Bishop Visited Bank Of Baroda Mangaluru Office | ಬ್ಯಾಂಕ್ ಆಫ್ ಬರೋಡಾಗೆ ಶುಭ ಹಾರೈಸಿದ ಮಂಗಳೂರು ಬಿಷಪ್
Thursday, November 19, 2020
ಮಂಗಳೂರು: ಮಂಗಳೂರು ಬಿಷಪ್ ಪೀಟರ್ ಪೌಲ್ ಸಲ್ಡನಾ ಅವರು ಮಂಗಳೂರಿನಲ್ಲಿ ಇರುವ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ವಲಯ ಕಚೇರಿಗೆ ಭೇಟಿ ನೀಡಿದರು.
ಬಿಷಪ್ ಅವರನ್ನು ಬ್ಯಾಂಕ್ ಆಫ್ ಬರೋಡಾದ ವಲಯ ಮಹಾ ಪ್ರಬಂಧಕರಾದ ಸುಜಯ ಯು ಶೆಟ್ಟಿ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ಮಂಗಳೂರು ನಗರ ಪ್ರಾದೇಶಿ ವ್ಯವಸ್ಥಾಪಕರಾದ ಸುನಿಲ್ ಕೆ. ಪೈ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭೇಟಿ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಷಪ್ ಅವರು ಬ್ಯಾಂಕ್‌ಗೆ ಶುಭ ಹಾರೈಸಿದರು.