-->
tribute to deceased in Boat accident | ಬೋಟ್ ದುರಂತ: ಮಡಿದ ಮೀನುಗಾರ ಕಾರ್ಮಿಕರಿಗೆ ಸಂತಾಪ, ಗರಿಷ್ಟ ಪರಿಹಾರಕ್ಕೆ ಒತ್ತಾಯ

tribute to deceased in Boat accident | ಬೋಟ್ ದುರಂತ: ಮಡಿದ ಮೀನುಗಾರ ಕಾರ್ಮಿಕರಿಗೆ ಸಂತಾಪ, ಗರಿಷ್ಟ ಪರಿಹಾರಕ್ಕೆ ಒತ್ತಾಯ




ಮಂಗಳೂರು, emungaru report: ಮೀನುಗಾರಿಕಾ ದೋಣಿ ದುರಂತದಲ್ಲಿ ಮೃತಪಟ್ಟವರಿಗೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸಂತಾಪ ಸೂಚಿಸಲಾಯಿತು. ನಗರದ ಹಳೆ ಬಂದರು ಕಾರ್ಮಿಕರ ಕಟ್ಟೆಯಲ್ಲಿ ಮೃತ ಮೀನುಗಾರಿಕಾ ಕಾರ್ಮಿಕರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಹಮಾಲಿ ಕಾರ್ಮಿಕರು ಬೆಳಿಗ್ಗಿನಿಂದ ಸಂಜೆ ವರೆಗಿನ ಕೆಲಸ ಸ್ಥಗಿತಗೊಳಿಸಿ ಕಾರ್ಮಿಕರ ಕಟ್ಟೆಯಲ್ಲಿ ಸೇರಿ ಸಗಟು ಮಾರುಕಟ್ಟೆ ಮತ್ತು ದಕ್ಕೆ ಪರಿಸರದಲ್ಲಿ ಮೌನ ಮೆರವಣಿಗೆ ನಡೆಸಿದರು. ಬಳಿಕ ಸಂತಾಪ ಸಭೆಯನ್ನು ನಡೆಸಲಾಯಿತು.


emungaru report


ಸಭೆಯನ್ನು ಉದ್ದೇಶಿಸಿ ಬಂದರು ಶ್ರಮಿಕರು ಮತ್ತು ಹಮಾಲಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿದರು. ಇಡೀ ಕರಾವಳಿಯನ್ನು ದಿಗ್ಮೂಢಗೊಳಿಸಿದ ಬೋಟ್ ದುರಂತದಲ್ಲಿ ಆರು ಮಂದಿ ಕಾರ್ಮಿಕರು ಮೃತಪಟ್ಟಿರುತ್ತಾರೆ. ಅವರ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ತಲಾ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು ಮತ್ತು ಮೃತ ವ್ಯಕ್ತಿಗಳ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಅವರು ಆಗ್ರಹಿಸಿದರು.


emungaru report


ಸಭೆಯಲ್ಲಿ ಹಮಾಲಿ ಮತ್ತು ಬಂದರು ಕಾರ್ಮಿಕರ ಸಂಘಟನೆಯ ಅಧ್ಯಕ್ಷರಾದ ವಿಲ್ಲಿ ವಿಲ್ಸನ್, ಉಪಾಧ್ಯಕ್ಷ ಹಸನ್ ಮೋನು ಬೇಂಗ್ರೆ, ಕೋಶಾಧಿಕಾರಿ ಹರೀಶ್ ಕೆರೆಬೈಲ್, ಒಣಮೀನು ವಿಭಾಗದ ಅಧ್ಯಕ್ಷ ಮಹಮ್ಮದ್ ಮೋನು, ಕಾರ್ಯದರ್ಶಿ ಮಯ್ಯದಿ ಬೇಂಗ್ರೆ, ಹಿರಿಯ ಮುಂದಾಳುಗಳಾದ ಫಾರೂಕ್ ಉಳ್ಳಾಲ್, ಮಜೀದ್ ಉಳ್ಳಾಲ್, ಚಂದ್ರಹಾಸ್ ಕುತ್ತಾರ್, ಸಿದ್ದಿಕ್ ಬೇಂಗ್ರೆ, ಮಾಧವ ಕಾವೂರು ಮೊದಲಾದವರು ಉಪಸ್ಥಿತರಿದ್ದರು.


emungaru report


Ads on article

Advertise in articles 1

advertising articles 2

Advertise under the article