GB on Virtual Meeting | ವರ್ಚುವಲ್ ಕಾನ್ಫರೆನ್ಸ್ ಮೂಲಕ ವಾರ್ಷಿಕ ಮಹಾಸಭೆ: ಎಸ್‌ಕೆ ಸರ್ಕಾರಿ ನೌಕರರ ಸಹಕಾರಿ ಸಂಘದ ಪ್ರಕಟಣೆ
ದಿ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ -ಆಪರೇಟಿವ್ ಬ್ಯಾಂಕ್ ಲಿಮಿಟೆಡ್; ಕೊಡಿಯಾಲ್ ಬೈಲ್; ಮಂಗಳೂರು - ಇದರ ವಾರ್ಷಿಕ ಮಹಾಸಭೆಯು ವರ್ಚುವಲ್ ಕಾನ್ಫರೆನ್ಸ್ ಮೂಲಕ ದಿನಾಂಕ 20.12. 2020 ರ೦ದು ಪೂರ್ವಾಹ್ನ 11 ಗಂಟೆಗೆ ಜರಗಲಿದೆ.
ಕೋವಿಡ್ ಬಿಕ್ಕಟ್ಟಿನಿಂದ ಉದ್ಭವಿಸಿರುವ ಪರಿಸ್ಥಿತಿ ಯಿಂದಾಗಿ ರಾಜ್ಯ ಸರಕಾರದ ಆದೇಶದಂತೆ ಪ್ರಸ್ತುತ ಸಾಲಿನ ಸರ್ವ ಸದಸ್ಯರ ಸಭೆಯು ವರ್ಚುವಲ್ ಕಾನ್ಫರೆನ್ಸ್ ಮಾದರಿಯಲ್ಲಿ ದಿನಾಂಕ 20.12.2020 ರಂದು ಝೂಮ್ ಫ್ಲಾಟ್ ಫಾರ್ಮ್ ನಲ್ಲಿ ನಡೆಯಲಿದ್ದು ಸದಸ್ಯರು ಸಭೆಯ ಲಿಂಕ್ a1tiny.in/kanara ಬಳಸಿ ಅಥವಾ ಕ್ಯುಆರ್ ಕೋಡನ್ನು ಸ್ಕ್ಯಾನ್ ಮಾಡಿ ತಮ್ಮ ಸದಸ್ಯ ಸಂಖ್ಯೆಯ ಕೊನೆಯ 5 ಅಂಕಗಳನ್ನು ನಮೂದಿಸಿ ಸಭೆಗೆ ಲಾಗಿನ್ ಆಗಲು ವಿನಂತಿಸಲಾಗಿದೆ.
ಸದಸ್ಯರ ಲಾಗ್ ಇನ್ ಹಾಜರಾತಿ ಆಗಿರುತ್ತದೆ. ಆದುದರಿಂದ ಮಾನ್ಯ ಸದಸ್ಯರು ವರ್ಚುವಲ್ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಸರ್ವ ಸದಸ್ಯರ ಮಹಾಸಭೆಯಲ್ಲಿ ತಪ್ಪದೇ ಭಾಗವಹಿಸಬೇಕಾಗಿ ವಿನಂತಿ.
ಬ್ಯಾಂಕಿನ ಸದಸ್ಯರಿಗೆ ಸಂತಸದ ಸುದ್ದಿ. ವೈಯಕ್ತಿಕ ಸಾಲದ ಬಡ್ಡಿ ದರ 9.85%
ಬ್ಯಾಂಕಿನ ಸದಸ್ಯರ ಬಹುದಿನಗಳ ಕೋರಿಕೆಯಂತೆ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲಾಗಿದ್ದು ಪ್ರಸ್ತುತ ವಿವಿಧ ಸಾಲಗಳ ಬಡ್ಡಿ ದರ ಈ ಕೆಳಗಿನಂತಿವೆ.
ವೈಯಕ್ತಿಕ ಸಾಲದ ಬಡ್ಡಿದರವನ್ನು *9.85%* ಕ್ಕೆ ಇಳಿಸಲಾಗಿದೆ.
ಚಿನ್ನಾಭರಣಗಳ ಮೇಲಿನ ಸಾಲದ ಬಡ್ಡಿದರ *10%* ಆಗಿರುತ್ತದೆ.
ಬ್ಯಾಂಕಿನ ಸದಸ್ಯರು ಇದರ ಸದುಪಯೋಗ ಪಡೆಯಬೇಕಾಗಿ ವಿನಂತಿ.
ಪ್ರಕಾಶ್ ನಾಯಕ್; ಅಧ್ಯಕ್ಷರು; ಗೌರ್ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್; ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ; ಡೊ೦ಗರಕೇರಿ; ಮ೦ಗಳೂರು