-->
BJP MLA takes U Turn | ಕೇಂದ್ರ ಕೃಷಿ ಕಾಯ್ದೆಗೆ ಬಿಜೆಪಿ ಶಾಸಕನ ಅಪಸ್ವರ: ಕಮ್ಯೂನಿಸ್ಟರ ನಿಲುವಿಗೆ ಬೆಂಬಲ- ಯೂ ಟರ್ನ್ ಹೊಡೆದ ರಾಜಗೋಪಾಲ

BJP MLA takes U Turn | ಕೇಂದ್ರ ಕೃಷಿ ಕಾಯ್ದೆಗೆ ಬಿಜೆಪಿ ಶಾಸಕನ ಅಪಸ್ವರ: ಕಮ್ಯೂನಿಸ್ಟರ ನಿಲುವಿಗೆ ಬೆಂಬಲ- ಯೂ ಟರ್ನ್ ಹೊಡೆದ ರಾಜಗೋಪಾಲ






ಕೇಂದ್ರ ಕೃಷಿ ಕಾಯ್ದೆಗೆ ಬಿಜೆಪಿ ಶಾಸಕನ ಅಪಸ್ವರ: ಕಮ್ಯೂನಿಸ್ಟರ ನಿಲುವಿಗೆ ಬೆಂಬಲ- ಯೂ ಟರ್ನ್ ಹೊಡೆದ ರಾಜಗೋಪಾಲ


ರಾಷ್ಟ್ರಮಟ್ಟದಲ್ಲೇ ಬಿಜೆಪಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಮುಜುಗರವಾಗುವ ಬೆಳವಣಿಗೆ. ಕೇಂದ್ರ ಸರ್ಕಾರ ತನ್ನ ಕೃಷಿ ನೀತಿ ವಿರುದ್ಧ ವಾರಗಟ್ಟಲೆ ಕೃಷಿಕರ ಪ್ರತಿಭಟನೆಗೆ ಜಗ್ಗದ ಬಿಜೆಪಿ ಮತ್ತು ಅದರ ನಾಯಕತ್ವ ಒಬ್ಬ ಯಕಶ್ಚಿತ್ ಶಾಸಕನ ವಿರೋಧಕ್ಕೆ ಅವಕ್ಕಾಗಿದೆ. ಅದೂ ತನ್ನದೇ ಪಕ್ಷದ ಶಾಸಕ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ಅಪಸ್ವರ ಎತ್ತಿರುವುದರಿಂದ ಶಾಕ್‌ಗೆ ಒಳಗಾಗಿದೆ.



ಹೌದು, ಈ ಘಟನೆ ನಡೆದಿರುವುದು ಕೇರಳದ ವಿಧಾನಸಭೆಯಲ್ಲಿ. ಸದನದಲ್ಲಿ ಬಿಜೆಪಿಯ ಏಕೈಕ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಓ. ರಾಜಗೋಪಾಲ್ ಅವರು ತಳೆದ ನಿಲುವು ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ಕೇಂದ್ರ ನಾಯಕತ್ವ ಮತ್ತು ಕೇಂದ್ರ ಸರ್ಕಾರ ಮುಜುಗರಕ್ಕೆ ಒಳಗಾಗುವ ಹಾಗೆ ನಡೆದುಕೊಂಡಿದ್ದಾರೆ.



ಕೇಂದ್ರದ ಕೃಷಿ ಮಸೂದೆ ವಿರುದ್ಧ ಕೇರಳ ಸರ್ಕಾರದ ನಿಲುವಿಗೆ ಬಿಜೆಪಿ ಶಾಸಕ ರಾಜಗೋಪಾಲ್ ಬೆಂಬಲ ಸೂಚಿಸಿದ್ದಾರೆ. ಹಾಗಾಗಿ ಈ ನಿರ್ಣಯ ಅವಿರೋಧವಾಗಿ ಅಂಗೀಕಾರಗೊಂಡಿದೆ.

ಬಿಜೆಪಿಯ ಶಾಸಕ ಓ. ರಾಜಗೋಪಾಲ್, ತಮ್ಮ ಭಾಷಣದ ವೇಳೆ ಕೃಷಿ ಕಾಯಿದೆಯನ್ನು ಸಮರ್ಥಿಸಿಕೊಂಡಿದ್ದು, ನಿರ್ಣಯದ ವಿರುದ್ಧ ಧ್ವನಿ ಎತ್ತಿದರೂ ಅಂತಿಮವಾಗಿ ಕೇರಳದ ಕಮ್ಯೂನಿಸ್ಟ್ ಸರ್ಕಾರ ಮಂಡಿಸಿದ ನಿರ್ಣಯಕ್ಕೆ ಮತ ಹಾಕಿದರು.



ಇದರಿಂದ ಪಕ್ಷದ ರಾಜ್ಯ ಬಿಜೆಪಿ ಘಟಕ ತೀವ್ರ ಆಘಾತಕ್ಕೆ ಒಳಗಾಗಿದೆ. ಅವರು ಹೀಗೆ ಯಾಕೆ ಮಾಡಿದರು ಎಂಬುದು ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿಕೆ ನೀಡಿದ್ದಾರೆ.



ತಮ್ಮ ನಿಲುವನ್ನು ಮತ್ತೆ ಸಮರ್ಥಿಸಿಕೊಂಡಿರುವ ಬಿಜೆಪಿ ಶಾಸಕ ಹಾಗೂ ಮಾಜಿ ಕೇಂದ್ರ ಸಚಿವ ಓ. ರಾಜ್‌ಗೋಪಾಲ್, ಸದನದ ಒಮ್ಮತದ ನಿರ್ಣಯವನ್ನು ನಾನು ಒಪ್ಪಿಕೊಂಡಿದ್ದೇನೆ. ಇದು ಪ್ರಜಾಪ್ರಭುತ್ವದ ಚೈತನ್ಯ ಎಂದು ಬಣ್ಣಿಸಿದ್ಧಾರೆ.



Ads on article

Advertise in articles 1

advertising articles 2

Advertise under the article