-->
Vijender supports Farmer Protest | ರೈತ ಹೋರಾಟಕ್ಕೆ ಬಾಕ್ಸರ್ ವಿಜೇಂದರ್ ಸಿಂಗ್ ಬೆಂಬಲ, ಕಾಯ್ದೆ ಹಿಂಪಡೆದಿದ್ದರೆ ಖೇಲ್ ರತ್ನ ವಾಪಸ್‌ ಎಚ್ಚರಿಕೆ

Vijender supports Farmer Protest | ರೈತ ಹೋರಾಟಕ್ಕೆ ಬಾಕ್ಸರ್ ವಿಜೇಂದರ್ ಸಿಂಗ್ ಬೆಂಬಲ, ಕಾಯ್ದೆ ಹಿಂಪಡೆದಿದ್ದರೆ ಖೇಲ್ ರತ್ನ ವಾಪಸ್‌ ಎಚ್ಚರಿಕೆ




ನವದೆಹಲಿ, Emungaru report:  ಕೇಂದ್ರ ಸರ್ಕಾರದ ಕೃಷಿ ಕಾಯಿದೆಯ ವಿರುದ್ಧ ಜನಾಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೇಶವ್ಯಾಪಿ ಪ್ರತಿಭಟನೆಗಳು, ಹೋರಾಟಗಳಿಗೆ ಸೆಲೆಬ್ರೆಟಿಗಳೂ ಬೆಂಬಲ ಸೂಚಿಸಿದ್ದಾರೆ. ನವದೆಹಲಿಯ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ ರೈತ ನಾಯಕರ ಜೊತೆ ಸರಣಿ ಮಾತುಕತೆಗಳನ್ನು ನಡೆಸಿದ್ದು, ಎಲ್ಲ ಮಾತುಕತೆಗಳಲ್ಲೂ ರೈತ ನಾಯಕರನ್ನು ಮನವೊಲಿಸುವಲ್ಲಿ ಸರ್ಕಾರದ ಪ್ರತಿನಿಧಿಗಳು ವಿಫಲರಾಗಿದ್ದಾರೆ.



ಇದೇ ವೇಳೆ, ಇದುವರೆಗೆ ತಮ್ಮ ಪಟ್ಟು ಬದಲಿಸದ ಅನ್ನದಾತರು ಒಮ್ಮತದ ನಿರ್ಧಾರಕ್ಕೆ ಬಂದಿದ್ದು, ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಭಾರತ ಬಂದ್‌ಗೂ ಕರೆ ನೀಡಿದ್ದಾರೆ.

ರೈತ ಹೋರಾಟಕ್ಕೆ ಬಾಲಿವುಡ್ ನಟ,ನಟಿಯರು, ಕ್ರೀಡಾಪಟುಗಳು ಬೆಂಬಲದ ಮಹಾಪೂರ ಹರಿಸಿದ್ದಾರೆ.

ಹರಿಯಾಣ ದೆಹಲಿ ಗಡಿಭಾಗದ ಸಿಂಘು ಎಂಬಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ರೈತರ ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದರು.



ಇದೇ ವೇಳೆ, ಮಾತನಾಡಿದ ಅವರು, ಈ ಕರಾಳ ಕಾನೂನನ್ನು ವಾಪಸ್ ಪಡೆಯದಿದ್ದರೆ ನಾನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ತನ್ನ ಪ್ರತಿಭಟನೆಯ ಸಂಕೇತವಾಗಿ ಕೇಂದ್ರ ಸರ್ಕಾರಕ್ಕೆ ವಾಪಸ್ ಮಾಡುವುದಾಗಿ ಘೋಷಿಸಿದರು.



ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾಗಿದ್ದು, 2009ರಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್ ಅವರಿಗೆ ಈ ಪುರಸ್ಕಾರ ಪ್ರದಾನ ಮಾಡಲಾಗಿತ್ತು.

Ads on article

Advertise in articles 1

advertising articles 2

Advertise under the article