
Govt employees co-po bank record profit | 44 ಲಕ್ಷ ನಿವ್ವಳ ಲಾಭ ಗಳಿಸಿದ ಸೌತ್ ಕೆನರಾ ಗವರ್ನ್‌ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸರಕಾರಿ ನೌಕರರ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಾಗಿರುವ ಹಾಗೂ ಶತಮಾನದ ಇತಿಹಾಸ ಹೊಂದಿರುವ ದಿ ಸೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್; ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ; ಡೊಂಗರಕೇರಿ; ಮಂಗಳೂರು ಇದರ 2019-20 ನೆಯ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ20.12.2020 ರಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಮಾದರಿಯಲ್ಲಿ ನಡೆಯಿತು.
ಬ್ಯಾಂಕು 2019--20 ನೆಯ ಸಾಲಿಗೆ ತೆರಿಗೆಪೂರ್ವ ₹67.10 ಲಕ್ಷಗಳಷ್ಟು ಲಾಭಗಳಿಸಿದ್ದು ಆದಾಯ ತೆರಿಗೆ ಪಾವತಿಯ ನಂತರ ನಿವ್ವಳ ಲಾಭ ₹44.01 ಲಕ್ಷ ಗಳಿಸಿರುತ್ತದೆ.
ಮಹಾಸಭೆಯ ಕಾರ್ಯಸೂಚಿಗಳನ್ನು ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲಕ್ಷ್ಮೀಶ ಎನ್.ಇವರು ಮಂಡಿಸಿದರು.
ಬ್ಯಾಂಕಿನ ಸದಸ್ಯರಿಗೆ ಅನುಕೂಲವಾಗುವಂತೆ ಸದಸ್ಯರ ಜಾಮೀನು ಸಾಲಗಳ ಮೇಲಿನ ಬಡ್ಡಿಯನ್ನು 9.85% ಕ್ಕೆ ಇಳಿಕೆ ಮಾಡಿ ನಿಗದಿಪಡಿಸಲಾಗಿದೆ ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.
ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ಪಿ. ಕೆ. ಕೃಷ್ಣ ಹಾಗೂ ನಿರ್ದೇಶಕರುಗಳಾದ ಶ್ರೀಮತಿ ತಿಲೋತ್ತಮ; ಶ್ರೀಪದ್ಮನಾಭ ಜೋಗಿ; ಶ್ರೀ ಅಕ್ಷಯ್ ಭಂಡಾರ್ಕಾರ್; ಶ್ರೀ ಬಿ.ಕೃಷ್ಣಪ್ಪ ನಾಯ್ಕ್; ಶ್ರೀ ಹೆಚ್. ಗಣೇಶ್ ರಾವ್: ಶ್ರೀ ಜಗದೀಶ್ ಪಿ.; ಶ್ರೀ ಜ್ಯೋತಿಪ್ರಕಾಶ್: ಶ್ರೀ ಎ. ಫ್ರಾಂಕಿ ಕುಟಿನ್ಹಾ; ಶ್ರೀಮತಿ ಶಶಿಕಲಾ; ಶ್ರೀ ಶಿವಾನಂದ ಎಂ. ಹಾಗೂ ಶ್ರೀಮತಿ ಸುಜಾತಾ ಉಪಸ್ಥಿತರಿದ್ದರು.