Hindu Mahasabha | ಅಬ್ಬಕ್ಕ ಭವನಕ್ಕೆ ನೀಡಬೇಕಾದ ಜಮೀನು ಬ್ಯಾರಿ ಭವನಕ್ಕೆ: ಹಿಂದೂ ಮಹಾಸಭಾ ಖಂಡನೆ
ಮಂಗಳೂರು: ರಾಣಿ ಅಬ್ಬಕ್ಕ ಭವನಕ್ಕೆ ನೀಡಬೇಕಾದ ಜಮೀನನ್ನು ಬ್ಯಾರಿ ಭವನಕ್ಕೆ ನೀಡಿದ ರಾಜ್ಯ ಸರಕಾರದ ಕ್ರಮವನ್ನು ಅಖಿಲ ಭಾರತ ಹಿಂದೂ ಮಹಾಸಭಾ ಖಂಡಿಸಿದೆ. ಈ ಬಗ್ಗೆ ದ.ಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
"ಉಳ್ಳಾಲ ರಾಣಿ ಅಬ್ಬಕ್ಕ" ಹೆಸರು ದಕ್ಷಿಣ ಕನ್ನಡ ಜಿಲ್ಲೆಯ ಹೆಗ್ಗಳಿಕೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿರುತ್ತದೆ. ಅವರ ಆರಾಧಕರು, ಅಭಿಮಾನಿಗಳು ಜಿಲ್ಲೆ, ರಾಜ್ಯ ಮತ್ತು ದೇಶದಲ್ಲೂ ಇದ್ದಾರೆ ಎಂದು ಅದು ಹೇಳಿದೆ.
ದೇಶದಲ್ಲಿ ಪೋರ್ಚುಗೀಸರ ಜತೆ ಹೋರಾಡಿದ ಪ್ರಥಮ ಮಹಿಳಾ ರಾಣಿ ಮತ್ತು ಇಂಗ್ಲೀಷರ ಜೊತೆ ನಾಲ್ಕು ದಶಕಗಳ ಕಾಲ ಹೋರಾಡಿ ಉಳ್ಳಲ ಬಂದರು ಪ್ರದೇಶವನ್ನು ಕಾಪಾಡಿದ ವೀರರಾಣಿ ಅಬ್ಬಕ್ಕ ದೇವಿಯ ಹೆಸರಿನಲ್ಲಿ ಭವನ ನಿಮ೯ಣಕ್ಕಾಗಿ ಉಳ್ಳಾಲ ಮತ್ತು ರಾಣಿ ಅಬ್ಬಕ್ಕ ಅಭಿಮಾನಿಗಳು ತೊಕೊಟು ಬಸ್ಸು ನಿಲ್ದಾಣದ ಹಿಂಭಾಗದ ಜಾಗವನ್ನು ನಿಗದಿಗೊಳಿಸಲಾಗಿತ್ತು.
ರಾಣಿ ಅಬ್ಬಕ್ಕ ಭವನ ನಿಮಾ೯ಣ ಮಾಡಲು ಸರಕಾರಕ್ಕೆ ಮನವಿ 'ಸಲ್ಲಿಸಿತ್ತು. ಆದರೆ ಆ ಜಮೀನನ್ನು ರಾಣಿ ಅಬ್ಬಕ್ಕ ಭವನ ನಿಮಾ೯ಣಕ್ಕೆ ನೀಡದೆ, ಬ್ಯಾರಿ ಭವನಕ್ಕೆ ನೀಡಬೇಕೆಂದು ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಓಲೈಕೆ ಮಾಡಿರುವುದು ಖಂಡನೀಯ ಮತ್ತು ಇದು ಜಿಲ್ಲೆಯ ಜನತೆಗೆ ಸರಕಾರ ಮಾಡಿರುವ ಅನ್ಯಾಯವಾಗಿರುತ್ತದೆ ಎಂದು ಹಿಂದೂ ಮಹಾಸಭಾ ಆರೋಪಿಸಿದೆ.
ಈ ಕೂಡಲೇ ಈ ಜಮೀನನ್ನ ರಾಣಿ ಅಬ್ಬಕ್ಕ ಭವನದ ನಿಮಾ೯ಣಕ್ಕೆ ಮೀಸಲಿರಿಸಿ, ಬ್ಯಾರಿ ಭವನಕ್ಕೆ ಬೇರೆ ಸ್ಥಳವನ್ನು ನೀಡಿ, ಜಿಲ್ಲೆಯ ಜನತೆಯಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಅಖಿಲ ಭಾರತ ಹಿಂದೂ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ನೀಡುತ್ತೆವೆ.ಕೋಮು ಸೂಕ್ಷ್ಮ ಪ್ರದೇಶದ ಅರಿವಿದ್ದು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಾಗ ನೀಡಲು ಒಪ್ಪಿದ್ದು ಯಕ್ಷಪ್ರಶ್ನೆಯಾಗಿರುತ್ತದೆ ಎಂದು ಮಹಾಸಭಾ ಹೇಳಿದೆ.
ಈ ಕೂಡಲೆ ಈ ನಿರ್ಧಾರವನ್ನು ಬದಲಾಯಿಸಬೇಕಾಗಿ ಮತ್ತು ಯಾವುದೇ ಕಾರಣಕ್ಕೂ ಶೀಘ್ರ ಶಿಲಾನ್ಯಾಸಕೈಗೊಳ್ಳುವುದನ್ನುಕೈ ಬಿಟ್ಟು, ಜಿಲ್ಲಾಧಿಕಾರಿಗಳು ಜಿಲ್ಲೆಯ ವಾಸ್ತವಿಕತೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಆದೇಶವನ್ನು ತಡೆಹಿಡಿಯಲು ಸಂಘಟನೆ ಒತ್ತಾಯಿಸಿದೆ.
ಮನವಿ ಸಲ್ಲಿಕೆ ಸಂದಭ೯ದಲ್ಲಿ ದ.ಕ ಜಿಲ್ಲಾಧ್ಯಕ್ಷ ಲೋಕೇಶ್ ಉಳ್ಳಾಲ , ಜಿಲ್ಲಾ ಉಪಾಧ್ಯಕ್ಷೆ ಅನುರಾಧ , ಮಂಗಳೂರು ವಿಧಾನ ಸಭಾ ಕ್ಷೇತ್ರ ಉಪಾಧ್ಯಕ್ಷ ಕೆ.ಪಿ. ಉದಯ ಕುಮಾರ್ ಹೆಗಡೆ, ಹಿಂದೂ ಯುವಕ ಸಭಾ ದ .ಕ ಜಿಲ್ಲಾಧ್ಯಕ್ಷ ಚಿದ೦ಬರ ರಾವ್ , ಹಿಂದೂ ಶ್ರಮಿಕ್ ಸಭಾ ದ.ಕ ಜಿಲ್ಲಾ ಕಾಯ೯ದಶಿ೯ ಪ್ರಕಾಶ್ ಭಟ್ , ಪವನ್ ,ಯತೀಶ್ ಮುಂತಾದವರು ಉಪಸ್ಥಿತರಿದ್ದರು.