-->
Intercaste Marriage | ಹಿಂದೂ ಯುವಕರ ಕೈ ಹಿಡಿದ ಮುಸ್ಲಿಂ ಯುವತಿಯರು: ಪೊಲೀಸ್ ಭದ್ರತೆಯಲ್ಲಿ ಶಾಸ್ತ್ರೋಕ್ತ ವಿವಾಹ

Intercaste Marriage | ಹಿಂದೂ ಯುವಕರ ಕೈ ಹಿಡಿದ ಮುಸ್ಲಿಂ ಯುವತಿಯರು: ಪೊಲೀಸ್ ಭದ್ರತೆಯಲ್ಲಿ ಶಾಸ್ತ್ರೋಕ್ತ ವಿವಾಹ



ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರು ಇಬ್ಬರು ಹಿಂದೂ ಯುವಕರನ್ನು ಪೊಲೀಸ್ ಭದ್ರತೆಯಲ್ಲಿ ವಿವಾಹವಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.


ಎರಡು ಪ್ರತ್ಯೇಕ ಅಂತರ್ಧಮೀಯ ವಿವಾಹವು ಶಾಸ್ತ್ರೋಕ್ತವಾಗಿ ನಡೆದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಇಬ್ಬರು ಮುಸ್ಲಿಂ ಮಹಿಳೆಯರು ತಾವು ಮೆಚ್ಚಿದ ಇಬ್ಬರು ಹಿಂದೂ ಯುವಕರನ್ನು ಶಾಸ್ತ್ರೋಕ್ತವಾಗಿ ಮದುವೆಯಾದರು. ಈ ವಿವಾಹಕ್ಕೆ ಪೊಲೀಸ್ ಭದ್ರತೆಯನ್ನೂ ನೀಡಲಾಗಿತ್ತು.


ಇದಕ್ಕೂ ಮುನ್ನ, ಆ ಮುಸ್ಲಿಂ ಮಹಿಳೆಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂದು ಹೇಳಲಾಗಿದೆ. ಮದುವೆಗೆ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.


ಮೊದಲನೇ ಪ್ರಕರಣ ಬರೇಲಿಯ ಹಫೀಜ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎರಡೂ ಕುಟುಂಬದವರನ್ನು ಕರೆಸಿ ಪೊಲೀಸರು ಕರೆಸಿ ಇತ್ಯರ್ಥಕ್ಕೆ ಪ್ರಯತ್ನಿಸಿದರು. ಹಿರಿಯರು ಪರಸ್ಪರ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ಪ್ರಕರಣವನ್ನು ಬಗೆಹರಿಸಿದ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.


ಎರಡನೇ ಪ್ರಕರಣ: ಬಹೇಡಿಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಪ್ರಕರಣದಲ್ಲಿ ಯುವತಿಯ ಕುಟುಂಬ, ಯುವಕನ ವಿರುದ್ಧ ಅಪಹರಣ ಹಾಗೂ ದರೋಡೆ ಪ್ರಕರಣವನ್ನು ದಾಖಲಿಸಿತ್ತು. ಆದರೆ, ಯುವತಿ ಠಾಣೆಗೆ ಆಗಮಿಸಿ ಯುವಕನ ಪರ ಹೇಳಿಕೆ ನೀಡಿ ಪ್ರಕರಣಕ್ಕೆ ಸುಖಾಂತ್ಯ ನೀಡಿದ್ದರು.


ಎರಡೂ ಪ್ರಕರಣಗಳಲ್ಲಿ ಯುವಕ-ಯುವತಿಯರು ಪ್ರಾಪ್ತ ವಯಸ್ಕರಾಗಿದ್ದು, ಎರಡೂ ಪ್ರಕರಣಗಳಲ್ಲಿ ಯುವತಿಯರ ಹೇಳಿಕೆಯನ್ನು ಪರಿಗಣಿಸಿ, ಭದ್ರತೆಯನ್ನು ಒದಗಿಸಿದ್ದೇವೆ ಎಂದು ಎಸ್ಎಸ್ ಪಿ ತಿಳಿಸಿದ್ದಾರೆ. ನಂತರ ಎರಡೂ ಕುಟುಂಬ ಸದಸ್ಯರನ್ನು ಕರೆಸಿ ಮಾತುಕತೆ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ.

Ads on article

Advertise in articles 1

advertising articles 2

Advertise under the article