-->
Dist Judge used accused car | ಆರೋಪಿಯ ಐಷಾರಾಮಿ ಕಾರು ಬಳಸಿದ ಜಿಲ್ಲಾ ನ್ಯಾಯಾಧೀಶರು: ಮರೆಯಲಾರದ ಶಿಕ್ಷೆ ನೀಡಿದ ಹೈಕೋರ್ಟ್!

Dist Judge used accused car | ಆರೋಪಿಯ ಐಷಾರಾಮಿ ಕಾರು ಬಳಸಿದ ಜಿಲ್ಲಾ ನ್ಯಾಯಾಧೀಶರು: ಮರೆಯಲಾರದ ಶಿಕ್ಷೆ ನೀಡಿದ ಹೈಕೋರ್ಟ್!









ಆರೋಪಿಯೊಬ್ಬರ ಖಾಸಗಿ ವಾಹನವನ್ನು ತನ್ನ ವೈಯಕ್ತಿಕ ಉಪಯೋಗಕ್ಕೆ ಬಳಸಿಕೊಂಡ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ಹೈಕೋರ್ಟ್ ಅಮಾನತು ಮಾಡಿದೆ. ಈ ಪ್ರಕರಣ ನಡೆದಿರುವುದು ಉತ್ತರಾಖಂಡ ರಾಜ್ಯದಲ್ಲಿ.


ಡೆಹರಾಡೂನ್ ಜಿಲ್ಲಾ ನ್ಯಾಯಾಧೀಶರೊಬ್ಬರು ಈ ಪ್ರಕರಣದಲ್ಲಿ ಅಮಾನತ್ತಾಗಿದ್ದು, ನ್ಯಾಯಾಂಗವೇ ತಲೆತಗ್ಗಿಸುವಂತಾಗಿದೆ. ಜಿಲ್ಲಾ ನ್ಯಾಯಾಧೀಶರಾದ ಪ್ರಶಾಂತ್ ಜೋಷಿ ಅವರು ಅಮಾನತ್ತಾಗಿರುವ ವ್ಯಕ್ತಿ.


ಆರೋಪಿಯೊಬ್ಬರು ತಮ್ಮ ವಿರುದ್ಧ ದಾಖಲಾದ ಪ್ರಥಮ ಮಾಹಿತಿ ವರದಿಯನ್ನು ವಜಾಗೊಳಿಸಬೇಕು ಎಂಬ ಅರ್ಜಿಯನ್ನು ಹೈಕೋರ್ಟ್ ಮುಂದೆ ಸಲ್ಲಿಸಿದ್ದರು.


ಘಟನೆಯ ವಿವರ


ಅಮಾನತಾಗಿ ಒಳಗಾಗಿರುವ ನ್ಯಾಯಾಧೀಶರಾದ ಪ್ರಶಾಂತ್ ಜೋಷಿ ಮಸ್ಸೂರಿಯ ನ್ಯಾಯಾಲಯದ ತಮ್ಮಕರ್ತವ್ಯಕ್ಕೆ ಹಾಜರಾಗಲು ತಮಗೆ ನೀಡಲಾಗಿದ್ದ ಅಧಿಕೃತ ಇಲಾಖಾ ವಾಹನದಲ್ಲಿ ಹೋಗಬೇಕಿತ್ತು. ಆದರೆ, ಅವರು ಇದರ ಬದಲು ಆರೋಪಿ ನೀಡಿದ್ದ ಐಷಾರಾಮಿ ಆಡಿ ಕಾರನ್ನುಬಳಸಿಕೊಂಡರು.


ಪ್ರಾಥಮಿಕ ತನಿಖೆಯ ಬಳಿಕ, ಈ ಕಾರು ಕೇವಲ್ ಕೃಷ್ಣನ್ ಸಾಯಿನ್ ಅವರಿಗೆ ಸೇರಿದ್ದು ಎಂಬುದು ಬಯಲಾಯಿತು. ಈತ ಡೆಹರಾಡೂನ್ ಜಿಲ್ಲಾ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇದ್ದ ಪ್ರಕರಣವೊಂದರ ಆರೋಪಿಯಾಗಿದ್ದ. ಅಲ್ಲದೆ, ಈ ಆರೋಪಿ ಕೇವಲ್ ಕೃಷ್ಣನ್ ಸಾಯಿನ್ ತಮ್ಮ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ವಜಾಗೊಳಿಸುವಂತೆ ಮೇಲ್ಮನವಿ ಸಲ್ಲಿಸಿದ್ದ.


ಕಾರನ್ನು ಬಳಿಸಿಕೊಂಡಿದ್ದ ಆರೋಪಿತರಾಗಿರುವ ಜಿಲ್ಲಾ ನ್ಯಾಯಾಧೀಶರು ತಾವು ಬಳಿಸಿದ್ದ ಆಡಿ ಕಾರನ್ನು ನ್ಯಾಯಾಧೀಶರ ವಾಹನಕ್ಕೆ ಮೀಸಲಾಗಿದ್ದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದರು. ಇಂತಹ ವ್ಯಕ್ತಿಯೊಬ್ಬರು ನ್ಯಾಯಾಂಗ ಇಲಾಖೆಯ ಅಧಿಕಾರಿಯಾಗಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ ಎಂಬುದಾಗಿ ಅಮಾನತು ತೀರ್ಪು ಪ್ರಕಟಿಸಿದ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. 

Ads on article

Advertise in articles 1

advertising articles 2

Advertise under the article