Kukke Champa Shasti Rathotsava | ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮ-ಸಡಗರದ ಚಂಪಾಷಷ್ಠಿ: ರಥೋತ್ಸವಕ್ಕೆ ಸಾಕ್ಷಿಯಾದ ಭಕ್ತಸಾಗರ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 15 ದಿನಗಳ ಕಾಲ ನಡೆಯುವ ವೈಭವದ ಚಂಪಾಷಷ್ಠಿ ಮಹೋತ್ಸವ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಷಷ್ಠಿಯ ದಿನ ದೇವರ ದಿವ್ಯ ಬ್ರಹ್ಮರಥೋತ್ಸವ ಎಳೆಯಲಾಗುತ್ತದೆ. ಈ ಬ್ರಹ್ಮರಥ ಕಟ್ಟುವುದೇ ಒಂದು ವಿಶೇಷತೆಯಿಂದ ಕೂಡಿದ ಕಾರ್ಯ. ಸಾಮಾನ್ಯವಾಗಿ ರಥವನ್ನು ನೈಲಾನ್ ಅಥವಾ ಇತರ ಹಗ್ಗದೊಂದಿಗೆ ಕಟ್ಟಲಾಗುತ್ತದೆ.
ಆದರೆ, ಈ ಬ್ರಹ್ಮರಥವನ್ನು ಎಳೆಯಲು ಹಗ್ಗವನ್ನು ಬಳಸುವಂತಿಲ್ಲ. ಬಿದಿರು ಹಾಗೂ ನಾಗರಬೆತ್ತವನ್ನು ಬಳಸಿಕೊಂಡು ರಥವನ್ನು ಕಟ್ಟಿರುವುದು ವಿಶೇಷ. ಈ ಕಾರ್ಯವನ್ನು ಸ್ಥಳಿಯ ಮಲೆ ಕುಡಿಯರು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ನಿರ್ವಹಿಸುತ್ತಾರೆ.
ಚಂಪಾಷಷ್ಠಿ ವಾರ್ಷಿಕ ಜಾತ್ರೆ ಪ್ರಯುಕ್ತ ಮಾರ್ಗಶಿರಾ ಶುದ್ಧ ಪಂಚಮಿಯ ದಿನದಂದು ಪಲ್ಲಕ್ಕಿ ಪೂಜೆ, ರಾತ್ರಿ ತೈಲಾಭ್ಯಂಜನ ಮತ್ತು ಮಧ್ಯರಾತ್ರಿ ಪಂಚಮಿ ರಥೋತ್ಸವ ನಡೆಯುತ್ತದೆ.
ಈ ಸಂದರ್ಭದಲ್ಲಿ ಆಕರ್ಷಕ ಬೆಡಿ ಉತ್ಸವವೂ ಜರುತ್ತದೆ. ಬೆಳಿಗ್ಗೆ ಬ್ರಹ್ಮರಥೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಭಕ್ತಜನಸಾಗರ ಈ ಮಹಾ ಸಂಭ್ರಮವನ್ನು ಕಣ್ತುಂಬಿಕೊಂಡಿತು.