School Start | ವರ್ಷಾರಂಭಕ್ಕೆ ಶಾಲಾರಂಭದ ಸಡಗರ: ಶುಕ್ರವಾರದಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿ
Wednesday, December 30, 2020
ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ಮತ್ತು ವಿದ್ಯಾಗಮ ತರಗತಿಗಳನ್ನುಆರಂಭಿಸಲು ಶಿಕ್ಷಣ ಸಂಸ್ಥೆಗಳು ಭರದ ತಯಾರಿ ನಡೆಸಿವೆ.
ಕೆಲವು ಶಾಲೆಗಳಲ್ಲಿ ತರಗತಿ ಕೊಠಡಿ, ಶೌಚಾಲಯ ಸಹಿತ ಸ್ಯಾನಿಟೈಸೇಶನ್ ಪ್ರಕ್ರಿಯೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ಪ್ರತಿ ದಿನ ಥರ್ಮಲ್ ಸ್ಕ್ಯಾನಿಂಗ್ ನಡೆಸಲಿದ್ದು, ಯಾವುದೇ ವಿದ್ಯಾರ್ಥಿಗೆ ಸಮಸ್ಯೆ ಆಗದಂತೆ ತರಗತಿ ಆರಂಭಿಸಲು ಸಿದ್ದತೆ ನಡೆಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪಿಯು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
6-7ನೇ ತರಗತಿಗಳು ಬೆಳಿಗ್ಗೆ 10ರಿಂದ 12-30 ತನಕ ನಡೆದರೆ, 8, 9 ನೇ ತರಗತಿಗಳು ಅಪರಾಹ್ನ 2ರಿಂದ 4-30ರ ವರೆಗೆ ನಡೆಯಲಿದೆ.
ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ಮಾಲಕರು ಕ್ಯಾಶ್ ಲೆಸ್ ಸೇವೆಯನ್ನು ನಡೆಸಲಿದ್ದಾರೆ. ಶಾಲೆಗೆ ಕಳುಹಿಸುವಾಗ ಪೋಷಕರ ಅನುಮತಿ ಪತ್ರ ಕಡ್ಡಾಯ. ಇಲ್ಲದಿದ್ದರೆ ಆನ್ ಲೈನ್ ತರಗತಿಗಳಲ್ಲಿ ಭಾಗವಹಿಸಬಹುದು. ಇಲ್ಲವೇ ಚಂದನ ವಾಹಿನಿಯಲ್ಲಿ ತರಗತಿಗಳ ಕಾರ್ಯಕ್ರಮವನ್ನು ನೋಡಬಹುದು...