Alvas News | ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕ್ಯಾಂಪ್ ಆಳ್ವಾಸ್‌ನಲ್ಲಿ ಸಮಾರೋಪ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ಆಳ್ವಾಸ್ ಎನ್‌ಸಿಸಿ ಘಟಕ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಹಯೋಗದೊಂದಿಗೆ ನಡೆದ 3 ದಿನಗಳ ಕ್ಯಾಂಪ್‌ನ ಸಮಾರೋಪ ಸಮಾರಂಭ ಮಿಜಾರಿನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಂಗಳೂರು ಗ್ರೂಪ್ ಹೆಡ್ ಕ್ವಾರ್ಟರ್ಸ್ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮ, "ಪ್ರತಿಯೊಬ್ಬರೂ ಇನ್ನೊಬ್ಬರ ಕುರಿತು ಕಾಳಜಿವಹಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಅಲ್ಲದೆ ಸಹಾನುಭೂತಿ, ಭರವಸೆ, ಧೈರ್ಯದಿಂದ ಜೀವನ ನಡೆಸಬೇಕು ಎಂದರು. ಜೀವನದಲ್ಲಿ ಸಾವಿರ ಸಮಸ್ಯೆಗಳು ಬಂದರು ಅದನ್ನು ತಾಳ್ಮೆಯಿಂದ ಎದುರಿಸಿ, ಇತರರ ಸಮಸ್ಯೆಗೂ ಸ್ಪಂದಿಸುವ ಹೃದಯ ಶ್ರೀಮಂತಿಕೆ ಹೊಂದಿರಬೇಕು’’ ಎಂದರು.
ನಂತರ ಮಾತಾನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ತಾವೂ NCC ಕೆಡೆಟ್ ಆಗಿದ್ದ ದಿನಗಳನ್ನು ನೆನಪಿಸಿದರು.
ಕ್ಯಾಂಪ್‌ನಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಸ್.ಐ. ಪ್ರವೀಣ್ ಕುಮಾರ್ ಉಪಾಧ್ಯ, ಮುಖ್ಯ ಕಾನ್ ಸ್ಟೇಬಲ್ ಬಾಳಪ್ಪ ಎಂ.ಜಿ., ಹೆಡ್ ಕಾನ್ ಸ್ಟೇಬಲ್ ಜಿ.ಎಲ್ ಆಕಾಶ್, ಕಾನ್ ಸ್ಟೇಬಲ್ ಜಾವೇದ್ ಖಾಸಿ, ಕಾನ್ ಸ್ಟೇಬಲ್ ಜಿ.ಡಿ. ಕಣ್ಣನ್ ಕೆ.ಎಸ್., ಕಾನ್ಸ್ಟೆಬಲ್ ಎಸ್. ಸಿ ಹೂಗಾರ್ ಆಗಮಿಸಿದರು.