
Prostitution center busted at Manglauru | ಅತ್ತಾವರದಲ್ಲಿ ವೇಶ್ಯಾವಾಟಿಕೆ: ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳ ಬಂಧನ
Sunday, January 24, 2021
ಮಂಗಳೂರು ಅತ್ತಾವರದ ಆಮಂತ್ರಣ ವಸತಿಗೃಹದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಸತಿ ಗೃಹದ ಮ್ಯಾನೇಜರ್ ಚಂದ್ರಶೇಖರ್ ಮತ್ತು ರೂಮ್ ಬಾಯ್ ಹರೀಶ್ ಪೂಜಾರಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಮಂಗಳೂರು ಅತ್ತಾವರದ ಆಮಂತ್ರಣ ವಸತಿಗೃಹದಲ್ಲಿ ಮ್ಯಾನೇಜರ್ ಚಂದ್ರಶೇಖರ್ ಮತ್ತು ಹರೀಶ್ ಪೂಜಾರಿ ಅವರು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ, ವಸತಿಗೃಹದ ಕೊಠಡಿ ಸಂಖ್ಯೆ 211 ಮತ್ತು 212ರಲ್ಲಿ ಹಣಕ್ಕಾಗಿ ಗಿರಾಕಿಗಳನ್ನು ಕರೆಯಿಸಿ ಈ ದಂಧೆ ನಡೆಸುತ್ತಿರುವುದು ಬಯಲಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನೊಂದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದ್ದು, ಗಿರಾಕಿಗಳು ಮತ್ತು ನೊಂದ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈ ಆರೋಪಿಗಳು ಹಣಕ್ಕಾಗಿ ದಂಧೆ ನಡೆಸುತ್ತಿರುವುದು ದೃಢಪಟ್ಟಿರುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.