-->
Beef Stall fire accused arrested | ಮಂಗಳೂರು: ತೊಕ್ಕೊಟ್ಟು ಬೀಫ್ ಸ್ಟಾಲ್‌ಗೆ ಬೆಂಕಿ: ಆರೋಪಿಯ ಬಂಧನ

Beef Stall fire accused arrested | ಮಂಗಳೂರು: ತೊಕ್ಕೊಟ್ಟು ಬೀಫ್ ಸ್ಟಾಲ್‌ಗೆ ಬೆಂಕಿ: ಆರೋಪಿಯ ಬಂಧನ



ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡಿದ್ದ ತೊಕ್ಕೊಟ್ಟು ಮಾಂಸದಂಗಡಿಗೆ ಬೆಂಕಿ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ತೊಕ್ಕೊಟ್ಟು ಒಳಪೇಟೆಯ ಚರ್ಚ್ ರಸ್ತೆ ನಿವಾಸಿ ನಾಗರಾಜ್ ಎಂದು ಗುರುತಿಸಲಾಗಿದೆ.


ಕಳೆದ ಶನಿವಾರ ಮುಂಜಾನೆ ತೊಕ್ಕೊಟ್ಟು ಒಳಪೇಟೆಯಲ್ಲಿ ಬೀಫ್ ಮಾಂಸ ಮಾರಾಟದ ಶೆಡ್‌ಗಳಿಗೆ ಬೆಂಕಿ ಹಾಕಿ ಸುಡಲಾಗಿತ್ತು. ಈ ಬಗ್ಗೆ ಮಹಮ್ಮದ್ ಹನೀಫ್ ಎಂಬವರು ದೂರು ನೀಡಿದ್ದರು.


ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ನಿರ್ದೇಶನದಂತೆ ಎಸಿಪಿ ರಂಜಿತ್ ಕುಮಾರ್ ಬಂಡಾರು ಸೂಚನೆಯಂತೆ ಇನ್ಸ್‌ಪೆಕ್ಟರ್ ಸಂದೀಪ್ ಜಿ.ಎಸ್. ಮತ್ತು ಎಸ್‌ ಪ್ರದೀಪ್ ಟಿ.ಆರ್. ಶಿವಕುಮಾರ್, ರೇವಣಸಿದ್ದಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

Ads on article

Advertise in articles 1

advertising articles 2

Advertise under the article