miscrents set fire to beef stall set fire at Mangaluru | ತಾತ್ಕಾಲಿಕ ಬೀಫ್ ಸ್ಟಾಲ್‌ಗೆ ಬೆಂಕಿ: ತೊಕ್ಕೊಟ್ಟಿನಲ್ಲಿ ಕಿಡಿಗೇಡಿಗಳ ಕೃತ್ಯ
Saturday, January 9, 2021
ಮಂಗಳೂರು: ತೊಕ್ಕೊಟ್ಟು ಒಳಪೇಟೆಯಲ್ಲಿ ತಾತ್ಕಾಲಿಕವಾಗಿ ಮಾಡಲಾದ ಶೆಡ್‌ನಲ್ಲಿ ನಡೆಯುತ್ತಿದ್ದ ಬೀಫ್ ಸ್ಟಾಲ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ಅಂಗಡಿ ಸುಟ್ಟು ಕರಕಲಾದ ಸ್ಥಿತಿಯಲ್ಲಿದೆ.
ತೊಕ್ಕೊಟ್ಟು ಒಳಪೇಟೆಯ ಮಾರುಕಟ್ಟೆಯನ್ನು ನೂತನವಾಗಿ ನಿರ್ಮಿಸುವ ಸಲುವಾಗಿ ಕೆಡವಲಾಗಿತ್ತು. ಮಾರುಕಟ್ಟೆಯ ಅಂಗಡಿಗಳನ್ನು ತಾತ್ಕಾಲಿಕವಾಗಿ ನಡೆಸಲು ಅವಕಾಶ ನೀಡಲಾಗಿತ್ತು. ಅದೇ ರೀತಿ, ಬೀಫ್ ಸ್ಟಾಲ್‌ನ್ನು ರೈಲ್ವೇ ಹಳಿ ಬದಿಯಲ್ಲಿ ಶೆಡ್‌ವೊಂದರಲ್ಲಿ ನಡೆಸಲಾಗುತ್ತಿತ್ತು.
ಈ ಸ್ಟಾಲ್‌ಗಳನ್ನು ಮುಚ್ಚುವಂತೆ ಕೆಲವು ಸಂಘಟನೆಗಳು ಉಳ್ಳಾಲ ನಗರಸಭೆಗೆ ಮನವಿ ಸಲ್ಲಿಸಿತ್ತು. ಈ ನಡುವೆ ಭೀಫ್ ಸ್ಟಾಲ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.