Child Kidnappers arrested | ಮಂಗಳೂರು: ಸೆರೆ ಸಿಕ್ಕ ಮಕ್ಕಳ ಕಳ್ಳರಿಗೆ ನ್ಯಾಯಾಂಗ ಬಂಧನ
Sunday, January 17, 2021
ಮಂಗಳೂರು ನಗರದ ಜನರನ್ನು ಬೆಚ್ಚಿ ಬೀಳಿಸಿದ್ದ ಮಕ್ಕಳ ಕಳ್ಳರು ಸೆರೆಯಾಗಿದ್ದಾರೆ.
ಪದವಿನಂಗಡಿ ಮಹಾಲಸಾ ದೇವಸ್ಥಾನದ ಬಳಿ ಅಪರಿಚಿತ ಮೂವರು ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಮಕ್ಕಳ ಮೇಲೆ ಗೋಣಿ ಚೀಲವನ್ನು ಹಾಕಿ ಮಕ್ಕಳನ್ನು ಅಪಹರಿಸಲು ಯತ್ನಿಸಿದ್ದು, ಈ ಯತ್ನದಿಂದ ಮಕ್ಕಳು ಚಾಣಾಕ್ಷ ರೀತಿಯಲ್ಲಿ ತಪ್ಪಿಸಿ ಪಾರಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರಶಾಂತ್ ಕೇಶವ್ ಎಂಬವರು ನೀಡಿದ ದೂರಿನನ್ವಯ ಮಂಗಳೂರು ನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಕಾವೂರಿನ ರಕ್ಷಕ್ ಶೆಟ್ಟಿ, ಬೋಂದೇಲ್‌ನ ಆಲಿಸ್ಟರ್ ತಾವ್ರೊ ಮತ್ತು ಕೆಐಒಸಿಎಲ್ ಕಾರ್ಟರ್ಸ್‌ನ ರಾಬಿನ್ ಸಿನ್ಹ ಅವರ ಪುತ್ರ ರಾಹುಲ್ ಸಿನ್ಹ ಬಂಧಿತ ಆರೋಪಿಗಳು. ಇವರು ಎಲ್ಲರೂ ಈ ಹಿಂದೆ ಮಾದಕ ದ್ರವ್ಯ ಸೇವನೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳು.