I dont know Radhika, HDK says | ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ: ರಾಧಿಕಾ ಎಂದರೆ ಯಾರೆಂದು ಗೊತ್ತಿಲ್ಲ ಎಂದದ್ದು ಯಾಕೆ..?
ರಾಧಿಕಾ ಮತ್ತು ಕುಮಾರಸ್ವಾಮಿ ಅವರ ಸಂಬಂಧ ಏನು ಎಂಬುದು ನಾಡಿನ ಎಲ್ಲರಿಗೂ ಗೊತ್ತು. ಒಂದಾನೊಂದು ಕಾಲದಲ್ಲಿ ಅವರಿಬ್ಬರ ನಡುವೆ ಯಾವ ರೀತಿಯ ಸಂಬಂಧ ಇತ್ತು ಎಂಬುದನ್ನು ರಾಧಿಕಾ ಅವರೇ ಒಮ್ಮೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿ ಹೇಳಿದ್ದರು. ಅಲ್ಲದೆ, ಉಭಯತ್ರರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಲೂ ಹರಿದಾಡುತ್ತಿದೆ.
ಆದರೆ, ರಾಧಿಕಾ ಎಂದರೆ ಯಾರು ಎಂಬುದು ಗೊತ್ತಿಲ್ಲ.... ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಅವರು ಯಾರೆಂದು ಗೊತ್ತಿಲ್ಲ, ಅವರ ಬಗ್ಗೆ ನನ್ನನ್ನು ಪ್ರಶ್ನೆ ಮಾಡಬೇಡಿ ಎಂದು ಕುಮಾರಣ್ಣ ಮಾಧ್ಯಮ ಮಿತ್ರರನ್ನು ವಿನಂತಿಸಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮುಖಾಮುಖಿಯಾದ ಕುಮಾರಸ್ವಾಮಿ ಅವರನ್ನು ರಾಧಿಕಾ ಅವರಿಗೆ ಸಿಸಿಬಿ ನೀಡಿದ ವಿಚಾರಣಾ ನೋಟೀಸ್ ಬಗ್ಗೆ ಪ್ರಶ್ನೆ ಕೇಳಿದರು. ಆಗ, ಸ್ವಲ್ಪ ಕಕ್ಕಾಬಿಕ್ಕಿಯಾದ ಕುಮಾರಣ್ಣ, ಅದ್ಯಾರೋ ನನಗೆ ಗೊತ್ತಿಲ್ಲ. ಅವರ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ರಾಧಿಕಾ ಕುರಿತ ಪ್ರಶ್ನೆಗಳಿಗೆ ಮಾತನಾಡಲು ನಿರಾಕರಿಸಿದರು.