-->
Eshwarappa all praise for Nalin, BL Santhosh | ನಳಿನ್, ಬಿ.ಎಲ್. ಸಂತೋಷ್ ದ.ಕ.ದವರು ಎನ್ನುವುದು ಹೆಮ್ಮೆಯ ವಿಚಾರ: ಈಶ್ವರಪ್ಪ

Eshwarappa all praise for Nalin, BL Santhosh | ನಳಿನ್, ಬಿ.ಎಲ್. ಸಂತೋಷ್ ದ.ಕ.ದವರು ಎನ್ನುವುದು ಹೆಮ್ಮೆಯ ವಿಚಾರ: ಈಶ್ವರಪ್ಪ


ಬಂಟ್ವಾಳ: ಬಂಟ್ವಾಳದ ಬ್ರಹ್ಮರಕೋಟ್ಲು ಬಂಟರ ಭವನದಲ್ಲಿ ಬಿಜೆಪಿ ಜನಸೇವಕ ಸಮಾವೇಶದ ಮೂಲಕ ಬೃಹತ್ ಶಕ್ತಿ ಪ್ರದರ್ಶನ ನಡೆಸಿದೆ.

ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ದಕ್ಷಿಣ ಕನ್ನಡದ ಸಂಘಟನಾ ಚಾತುರ್ಯವನ್ನು ಮುಕ್ತಕಂಠದಿಂದ ಕೊಂಡಾಡಿದರು.











ಇಲ್ಲಿನ ಜನ ಶಿಸ್ತಿಗೆ ಹೆಸರಾದವರು. ಶಿಸ್ತಿನ ಸಿಪಾಯಿಗಳಾದ ಶಾಸಕ ಕೆ. ಅಂಗಾರ ಮತ್ತು ಸುನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ವರಿಷ್ಠರು ಶೀಘ್ರವೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದಾಗ ಸಭೆಯಲ್ಲಿ ಹರ್ಷೋದ್ಘಾರ ಮೊಳಗಿತು.


ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಅವರ ಅನುಪಸ್ಥಿತಿಯಲ್ಲೂ ಕೊಂಡಾಡಿದ ಈಶ್ವರಪ್ಪ, ನಳಿನ್ ಸಂಘಟನಾ ಶಕ್ತಿ ಪ್ರತಿಪಕ್ಷ ನಾಯಕರನ್ನೇ ಬೆಚ್ಚಿಬೀಳಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿದ್ರೆಯೇ ಬೀಳುತ್ತಿಲ್ಲ. ಕನಸಿನಲ್ಲೂ ನಳಿನ್ ಅವರನ್ನು ಕಂಡು ಬೆಚ್ಚಿ ಬೀಳುತ್ತಾರೆ ಎಂದು ಈಶ್ವರಪ್ಪ ಲೇವಡಿ ಮಾಡಿದರು.



ಇದರ ಜೊತೆಗೆ, ಬಿ.ಎಲ್. ಸಂತೋಷ್ ರಾಷ್ಟ್ರ ರಾಜಕಾರಣದ ಶಕ್ತಿಯಾಗಿದ್ದಾರೆ. ಇವರಿಬ್ಬರೂ ಈ ಜಿಲ್ಲೆಯವರು ಎಂಬುದು ಹೆಮ್ಮೆಯ ಸಂಗತಿ ಎಂದು ತಮ್ಮ ಮನದಿಂಗಿತವನ್ನು ಮನೋಜ್ಞವಾಗಿ ಸಭೆಯ ಮುಂದಿಟ್ಟರು.


Ads on article

Advertise in articles 1

advertising articles 2

Advertise under the article