facebook fraud | ಫೇಸ್‌ಬುಕ್‌ನಲ್ಲಿ ಮೋಸ ಹೋಗದಿರಿ! ಶಿಕ್ಷಕರ ಹೆಸರಲ್ಲಿ ಹಣ ಕೇಳುವವರು ಇದ್ದಾರೆ.. ಜೋಕೆ
ನಿವೃತ್ತ ಶಿಕ್ಷಕರ ಹೆಸರಲ್ಲಿ ಹಣ ವಸೂಲಿಗೆ ಯತ್ನ
ಫೇಸ್‌ಬುಕ್ ನಕಲಿ ಖಾತೆ ಸೃಷ್ಟಿಸಿದ್ದ ವಂಚಕರು
ಕೋವಿಡ್ ಸಂಕಷ್ಟ ಕಾಲದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವಂಚಿಸುವವರು ಇದ್ದಾರೆ. ಸ್ವಲ್ಪ ಯಾಮಾರಿದರೂ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ನಿಶ್ಚಿತ.
ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣ ಬಳಸಿ ಹಣ ವಂಚಿಸುವುದು ಈಗ ಹಳೆಯ ಮಾತು. ಈಗ ಸಮಾಜದಲ್ಲಿ ಗೌರವಾನ್ವಿತರಾಗಿರುವ ಶಿಕ್ಷಕರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಫೇಸ್‌ಬುಕ್ ಮೂಲಕ ವಂಚಿಸುವ ಜಾಲವೊಂದು ಕರಾವಳಿಯಲ್ಲಿ ಸಕ್ರಿಯವಾಗಿದೆ.
ವಿಟ್ಲದ ಕೇಪು ಗ್ರಾಮದಲ್ಲಿ ನಿವೃತ್ತ ಶಿಕ್ಷಕರೊಬ್ಬರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಯಾಗಿದ್ದು, ತಮ್ಮ ವಿದ್ಯಾರ್ಥಿಗಳಲ್ಲಿ ಹಣ ಕೇಳಿ ಮೆಸ್ಸೇಜ್ ಕಳಿಸಿ ವಂಚಿಸುವ ಪ್ರಯತ್ನ ಮಾಡಲಾಗಿದೆ.
ನಿವೃತ್ತ ಶಿಕ್ಷಕ ಭಾಸ್ಕರ ಅಡ್ವಳ ಎಂಬವರ ಹೆಸರಲ್ಲಿ ಈ ಖಾತೆ ತೆರೆಯಲಾಗಿದೆ. ಗೆಳೆಯರು ಮತ್ತು ಇತರರಿಗೆ ಹಣ ಕೇಳಿ ಮೆಸ್ಸೇಜ್ ಕಳಿಸಲಾಗಿದೆ.
ಅಳಿಕೆಯ ಶ್ರೀ ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಚಂದ್ರಶೇಖರ್ ಅವರಿಗೆ ಈ ಬಗ್ಗೆ ಕರೆ ಮಾಡಿ ಹಣ ಕೇಳಲಾಗಿದೆ.
ಈ ಬಗ್ಗೆ ಭಾಸ್ಕರ ಅವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.