High Court new SOP | ಕೋರ್ಟ್ ಕಲಾಪ ಮತ್ತೆ ಸಹಜ ಸ್ಥಿತಿಯತ್ತ..?: ಹೈಕೋರ್ಟ್ ಹೊರಡಿಸಿದ ಹೊಸ ಮಾರ್ಗಸೂಚಿ ಬಗ್ಗೆ ಸಮಗ್ರ ಮಾಹಿತಿ
ರಾಜ್ಯದ ಏಳು ಜಿಲ್ಲೆಗಳನ್ನು ಹೊರತುಪಡಿಸಿ
ಉಳಿದ ಎಲ್ಲಾ ಜಿಲ್ಲೆಗಳಲ್ಲಿ ದಿನಾಂಕ 18.1.2021 ರಿಂದ
ನ್ಯಾಯಾಲಯ ಕಲಾಪಗಳು ಸಹಜ ಸ್ಥಿತಿಯತ್ತ.
ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 12.1.2021ರಂದು
ಹೊರಡಿಸಿದ ಮಾರ್ಪಡಿಸಲಾದ (modified)
ಕಾರ್ಯವಿಧಾನ ಮಾನದಂಡಗಳ (SOP) ಮುಖ್ಯಾಂಶಗಳು
ರಾಜ್ಯದ ಬೆಂಗಳೂರು ನಗರ; ಬೆಂಗಳೂರು ಗ್ರಾಮಾಂತರ; ಚಿಕ್ಕಬಳ್ಳಾಪುರ; ದಕ್ಷಿಣ ಕನ್ನಡ; ಮೈಸೂರು;ಶಿವಮೊಗ್ಗ ಮತ್ತು ತುಮಕೂರು ಈ ಏಳು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕಳೆದ 10 ದಿನಗಳಲ್ಲಿ ಕೋವಿಡ್ 19 ರ ಸಕ್ರಿಯ ಪ್ರಕರಣಗಳು 200 ಕ್ಕಿಂತಲೂ ಕಡಿಮೆ ಇರುವುದನ್ನು ಪರಿಗಣಿಸಿ ಸದರಿ ಜಿಲ್ಲೆಗಳಲ್ಲಿನ ನ್ಯಾಯಾಲಯಗಳು ದಿನಾಂಕ 15.3.2021ರ ಹಿಂದಿನ ಸಹಜ ಸ್ಥಿತಿಯಲ್ಲಿ ಈ ಕೆಳಗಿನ ನಿಬಂಧನೆಗಳಿಗೆ ಅನುಗುಣವಾಗಿ ಕಾಯ೯ನಿವ೯ಹಿಸಲಿವೆ ಎಂಬುದಾಗಿ ಮಾನ್ಯ ಕನಾ೯ಟಕ ಹೈಕೋರ್ಟ್ ದಿನಾಂಕ 12.1.2021 ಮಾಪ೯ಡಿಸಲಾದ ಕಾಯ೯ವಿಧಾನಗಳ ಮಾನದಂಡಗಳನ್ನು ಪ್ರಕಟಿಸಿದೆ.
1. ನ್ಯಾಯಾಲಯದ ಸಮುಚ್ಚಯವನ್ನು ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯನ್ನು ಕೋವಿಡ್ ರೋಗ ಲಕ್ಷಣಗಳ ಕುರಿತು ಥಮ೯ಲ್ ಸ್ಕಾನಿ೦ಗ ಪರೀಕ್ಷೆ ಮಾಡತಕ್ಕದ್ದು.
2. ನ್ಯಾಯಾಲಯದ ಸ೦ಕೀಣ೯ ಪ್ರವೇಶಕ್ಕೆ ಎರಡು ಪ್ರವೇಶ ದ್ವಾರಗಳನ್ನು ತೆರೆಯತಕ್ಕದ್ದು. ಒಂದು ಪ್ರವೇಶ ದ್ವಾರದಲ್ಲಿ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಗಳಿಗೆ; ಇನ್ನೊಂದು ಪ್ರವೇಶ ದ್ವಾರದಲ್ಲಿ ಪ್ರಕರಣದ ಪಕ್ಷಕಾರರು; ಸಾಕ್ಷಿದಾರರು; ಮತ್ತಿತರರಿಗೆ ಅವಕಾಶ ಕಲ್ಪಿಸತಕ್ಕದ್ದು
3. ಪ್ರವೇಶ ದ್ವಾರದಲ್ಲಿ ಸಾನಿಟೈಸರ್ ಒದಗಿಸತಕ್ಕದ್ದು.
4. ಲಿಫ್ಟ್ ಆಪರೇಟರ್ ಒಳಗೊಂಡ೦ತೆ ಲಿಫ್ಟ್ ನ ಸಾಮರ್ಥ್ಯದ ಅಧಾ೯೦ಶ ಜನರಿಗೆ ಮಾತ್ರ ಲಿಫ್ಟ್ ಬಳಕೆಗೆ ಅವಕಾಶವನ್ನು ಕಲ್ಪಿಸತಕ್ಕದ್ದು.
5. ನ್ಯಾಯಾಲಯದ ಸಮುಚ್ಚಯದಲ್ಲಿ; ಕಚೇರಿಯಲ್ಲಿ ; ನ್ಯಾಯಾ೦ಗಣದಲ್ಲಿ ಹಾಗೂ ವಕೀಲರ ಸ೦ಘದಲ್ಲಿ ಮುಖಗವಸನ್ನು (Mask) ಕಡ್ಡಾಯವಾಗಿ ಧರಿಸತಕ್ಕದ್ದು. ಮುಖಗವಸು ಧರಿಸದೆ ಇರುವ ವ್ಯಕ್ತಿಗಳು ಕ೦ಡುಬ೦ದಲ್ಲಿ ಅವರನ್ನು ನ್ಯಾಯಾಲಯದ ಸಮುಚ್ಚಯದಿ೦ದ ತೆರವುಗೊಳಿಸತಕ್ಕದ್ದು.
6. ಕೋವಿಡ್ 19 ರೋಗಲಕ್ಷಣವುಳ್ಳ ವ್ಯಕ್ತಿಗಳಿಗೆ ನ್ಯಾಯಾಲಯ ಸ೦ಕೀಣ೯ದ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
8. ವಕೀಲರ ಸ೦ಘದಲ್ಲಿ ಜನಜ೦ಗುಳಿಯನ್ನು ತಪ್ಪಿಸಲು ಅಧಾ೯೦ಶ ಆಸನಗಳನ್ನು ತೆರವುಗೊಳಿಸಬೇಕೆ೦ಬ ಈಗಿರುವ ನಿಬಂಧನೆ ಮುಂದುವರಿಯುತ್ತದೆ.
9.ನ್ಯಾಯಾಲಯದ ಪ್ರಕರಣಗಳಿಗೆ ಸ೦ಬ೦ಧಪಟ್ಟ ಪಕ್ಷಕಾರರು ಅನವಶ್ಯಕವಾಗಿ ನ್ಯಾಯಾಲಯ ಸ೦ಕೀಣ೯ಕ್ಕೆ ಭೇಟಿ ನೀಡದ೦ತೆ ನೋಡಿಕೊಳ್ಳವುದು ವಕೀಲರ ಹೊಣೆಗಾರಿಕೆಯಾಗಿದೆ. ಯಾವುದೇ ಸಕಾರಣವಿಲ್ಲದೆ ನ್ಯಾಯಾಲಯ ಪ್ರವೇಶ ಬಯಸುವ ಪಕ್ಷಕಾರರಿಗೆ ಪ್ರವೇಶವನ್ನು ನಿರಾಕರಿಸುವ ಅಧಿಕಾರವನ್ನು ನ್ಯಾಯಾಲಯದ ಸಿಬ್ಬಂದಿ ಹೊ೦ದಿರುತ್ತಾರೆ.
10.ಪಕ್ಷಕಾರರ ಉಪಸ್ಥಿತಿ ಅವಶ್ಯವಿದ್ದಲ್ಲಿ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಲು ಪಕ್ಷಕಾರರಲ್ಲಿ ಮನವಿ ಮಾಡುವ೦ತೆ ವಕೀಲರ ಸ೦ಘವನ್ನು ಕೋರಲಾಗಿದೆ.
11. ಉಪಾಹಾರ ಗೃಹ; ಜೆರಾಕ್ಸ್; ಟೈಪಿಂಗ್; ನೋಟರಿ ಇತ್ಯಾದಿ ಸೇವೆಗಳನ್ನು ನಡೆಸದ೦ತೆ ಹಾಕಿರುವ ನಿಬ೯೦ಧವನ್ನು ಸಡಿಲಿಸಲಾಗಿದೆ.
12. ದೈನಂದಿನ ಪ್ರಕರಣಗಳ ಯಾದಿಯನ್ನು (Cause List) ಎರಡು ಭಾಗಗಳಾಗಿ ವಿ೦ಗಡಿಸತಕ್ಕದ್ದು. ನ್ಯಾಯಾಲಯ ಸಮುಚ್ಚಯದಲ್ಲಿ ಪಕ್ಷಕಾರರ ಜನಸಂದಣಿಯನ್ನು ತಪ್ಪಿಸುವ ಸಲುವಾಗಿ ಬೆಳಗಿನ ಕಲಾಪಗಳಿಗೆ ಒಂದು ಯಾದಿ ಮತ್ತು ಅಪರಾಹ್ನದ ಕಲಾಪಗಳಿಗೆ ಇನ್ನೊಂದು ಯಾದಿಯನ್ನು ಸಿದ್ಧಪಡಿಸ ತಕ್ಕದ್ದು. ಆದರೆ ವಿಚಾರಣೆಗೆ ನಿಗದಿ ಪಡಿಸಲಾದ ಎಲ್ಲಾ ಪ್ರಕರಣಗಳು ಯಾದಿಯಲ್ಲಿ ಒಳಗೊಂಡಿರುವ ತಕ್ಕದ್ದು.
13. ಪ್ರಕರಣಗಳನ್ನು ನ್ಯಾಯಾಲಯದ ಕಚೇರಿಯ ಹೊರಗಡೆ ಪ್ರತ್ಯೇಕ ಸಮುಚ್ಚಯದಲ್ಲಿ ದಾಖಲಿಸಬೇಕೆಂಬ ನಿಬಂಧನೆಗಳು ಈಗಿರುವ ವ್ಯವಸ್ಥೆಯಡಿ ಮುಂದುವರಿಯಲಿದೆ.
14. ಈ ಮೇಲೆ ಕಾಣಿಸಿದ ಎಲ್ಲಾ ಸಡಿಲಿಕೆಗಳನ್ನು ಪ್ರಾಯೋಗಿಕ ನೆಲೆಯಲ್ಲಿ ಮಾಡಲಾಗಿದೆ. ವಕೀಲರು; ಪಕ್ಷಕಾರರು ಸಾಮಾಜಿಕ ಅಂತರ ಕಾಪಾಡದೆ; ಮಾಸ್ಕ್ ಧರಿಸದೆ; ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಮಾನ್ಯ ಹೈಕೋರ್ಟ್ ಸಡಿಲಿಕೆಗಳನ್ನು ಹಿಂತೆಗೆದುಕೊಳ್ಳುವ ಅಧಿಕಾರ ಹೊ೦ದಿದೆ.
II. ಮಾಪ೯ಡಿಸಲಾದ ಕಾರ್ಯವಿಧಾನ ಮಾನದಂಡಗಳು ಬೆಂಗಳೂರು ನಗರ; ಬೆಂಗಳೂರು ಗ್ರಾಮಾಂತರ; ಚಿಕ್ಕಬಳ್ಳಾಪುರ; ದಕ್ಷಿಣ ಕನ್ನಡ; ಮೈಸೂರು; ಶಿವಮೊಗ್ಗ ಮತ್ತು ತುಮಕೂರು ಈ 7 ಜಿಲ್ಲೆಗಳಿಗೆ ಅನ್ವಯಿಸುವುದಿಲ್ಲ. ಸದರಿ 7 ಜಿಲ್ಲೆಗಳಲ್ಲಿ ಹಿಂದಿನ ಕಾಯ೯ವಿಧಾನ ಮಾನದಂಡಗಳು ಮುಂದುವರಿಯಲಿದೆ.
ಆದರೆ ಸದರಿ 7ಜಿಲ್ಲೆಗಳಲ್ಲಿ ಕ್ಯಾಂಟೀನ್ ತೆರೆಯಲು ಅನುಮತಿಸಲಾಗಿದ್ದು ಸದರಿ ಕ್ಯಾಂಟೀನುಗಳಲ್ಲಿ ಟೀ ಮತ್ತು ಬಿಸ್ಕಿಟ್ ಜೊತೆಗೆ ಪ್ಯಾಕ್ ಮಾಡಲಾದ ಆಹಾರದ ಪೊಟ್ಟಣಗಳನ್ನು ಸಾಮಾಜಿಕ ಅಂತರ ಕಾಪಾಡಿ ಸರಬರಾಜು ಮಾಡಬಹುದಾಗಿದೆ. ಕ್ಯಾಂಟೀನ್ ಗಳಲ್ಲಿ ಕುಳಿತುಕೊಳ್ಳುವ ಆಸನ ವ್ಯವಸ್ಥೆಯನ್ನು ಅಧಾ೯೦ಶಕ್ಕೆ ಕಡಿತಗೊಳಿಸತಕ್ಕದ್ದು ಹಾಗೂ ಸ್ಯಾನಿಟೈಸರ್ ಬಳಸತಕ್ಕದ್ದು.
III. ಮೇಲ್ಕಾಣಿಸಿದ ಸಡಿಲಿಕೆಗಳು ಪ್ರಾಯೋಗಿಕ ನೆಲೆಯಲ್ಲಿ ದಿನಾಂಕ 18.1.2021 ರಿಂದ ಅನ್ವಯವಾಗಲಿವೆ. ಮುಂದಿನ ಬದಲಾವಣೆಗಳು ಅವಶ್ಯವಿದ್ದಲ್ಲಿ ಕಾಲಕಾಲಕ್ಕೆ ಪರಿಸ್ಥಿತಿಯನ್ನು ಅವಲೋಕಿಸಿ ಬದಲಾವಣೆ ಮಾಡಲಾಗುವುದು.
IV. ರಾಜ್ಯ ವಕೀಲರ ಪರಿಷತ್ ಮತ್ತು ವಕೀಲರ ಸಂಘ ಗಳೊಂದಿಗೆ ಸಮಾಲೋಚಿಸಿ ಮೇಲ್ಕಾಣಿಸಿದ 7 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
*ಮಾಹಿತಿ ಹಂಚಿಕೊಂಡವರು: ಪ್ರಕಾಶ್ ನಾಯಕ್; ಶಿರಸ್ತೆದಾರರು; ಜುಡಿಷಿಯಲ್ ಸರ್ವಿಸ್ ಸೆಂಟರ್: ಮಂಗಳೂರು.*