![HONEY TRAP- 4 accused arrested including 2 women | ಮಂಗಳೂರಲ್ಲಿ ಹನಿಟ್ರ್ಯಾಪ್: ಬಲಾತ್ಕಾರವಾಗಿ ನಗ್ನ ಚಿತ್ರ ತೆಗೆದು ವೈರಲ್ ಬೆದರಿಕೆ, ಇಬ್ಬರು ಮಹಿಳೆಯರ ಸಹಿತ ನಾಲ್ವರು ಅರೆಸ್ಟ್ HONEY TRAP- 4 accused arrested including 2 women | ಮಂಗಳೂರಲ್ಲಿ ಹನಿಟ್ರ್ಯಾಪ್: ಬಲಾತ್ಕಾರವಾಗಿ ನಗ್ನ ಚಿತ್ರ ತೆಗೆದು ವೈರಲ್ ಬೆದರಿಕೆ, ಇಬ್ಬರು ಮಹಿಳೆಯರ ಸಹಿತ ನಾಲ್ವರು ಅರೆಸ್ಟ್](https://blogger.googleusercontent.com/img/b/R29vZ2xl/AVvXsEiwwz5SdCV86pUT_eQA3XUuSo_w0VwSFsMhTm5WLJlGJP_Rj_puRodKkmG6B5o3Tn-eP7V1S5hy2w5CcswPv_ev7TYpH-26k7byVly5SHSYKKhxk-u_jzlhGCbd4R7BS-z3wXiqpgDRFHk/w640-h357/HONEY+TRAP-9.jpg)
HONEY TRAP- 4 accused arrested including 2 women | ಮಂಗಳೂರಲ್ಲಿ ಹನಿಟ್ರ್ಯಾಪ್: ಬಲಾತ್ಕಾರವಾಗಿ ನಗ್ನ ಚಿತ್ರ ತೆಗೆದು ವೈರಲ್ ಬೆದರಿಕೆ, ಇಬ್ಬರು ಮಹಿಳೆಯರ ಸಹಿತ ನಾಲ್ವರು ಅರೆಸ್ಟ್
ಕಡಲ ನಗರಿ ಮಂಗಳೂರಿನಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಹನಿಟ್ರ್ಯಾಪ್ ದಂಧೆಯನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಉಪಾಯವಾಗಿ ತಮ್ಮ ಮೋಹದ ಜಾಲ ಬೀಸಿ ಅವರನ್ನು ರತಿಕ್ರೀಡೆಗೆ ಆಹ್ವಾನಿಸಿ ವ್ಯವಸ್ಥಿತವಾಗಿ ಹನಿಟ್ರ್ಯಾಪ್ ಮಾಡುತ್ತಿದ್ದ ದುಷ್ಟಕೂಟದ ಜಾಲವೊಂದು ಮಂಗಳೂರಿನಲ್ಲಿ ನಡೆಯುತ್ತಿತ್ತು.
![](https://blogger.googleusercontent.com/img/b/R29vZ2xl/AVvXsEiEU2jfs6OfVYd0xz8bEdIkZoYt_zcpX2Ow4KaRR3v-g3hjcvScETcRgbKYF_FVXoIJCISor3k2CjYLsIeOe6OtcQxZnfOnfMVv16fGVVs8B-3ZIj9KLGiRH3Lpv9wV9MNVqdIS1K6mRrg/s16000/HONEY+TRAP-4.jpg)
ಕಡಲ ನಗರಿ ಮಂಗಳೂರಿನಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಹನಿಟ್ರ್ಯಾಪ್ ದಂಧೆಯನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಉಪಾಯವಾಗಿ ತಮ್ಮ ಮೋಹದ ಜಾಲ ಬೀಸಿ ಅವರನ್ನು ರತಿಕ್ರೀಡೆಗೆ ಆಹ್ವಾನಿಸಿ ವ್ಯವಸ್ಥಿತವಾಗಿ ಹನಿಟ್ರ್ಯಾಪ್ ಮಾಡುತ್ತಿದ್ದ ದುಷ್ಟಕೂಟದ ಜಾಲವೊಂದು ಮಂಗಳೂರಿನಲ್ಲಿ ನಡೆಯುತ್ತಿತ್ತು.
ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿ ಸ್ನೇಹ-ಸಲುಗೆಯಿಂದ ಉಪಾಯವಾಗಿ ಮಂಗಳೂರು ಸುರತ್ಕಲ್ ಹತ್ತಿರದ ಕೃಷ್ಣಾಪುರದ ಮನೆಯೊಂದಕ್ಕೆ ಕರೆಯಲಾಗುತ್ತದೆ. ಇದನ್ನೇ ನಂಬಿ ಬಂದ ಯುವಕನನ್ನು ಇನ್ನಿಬ್ಬರು ಯುವಕರು ಅಜ್ಞಾತ ಸ್ಥಳಕ್ಕೆ ಕಾರಿನಲ್ಲಿ ಕರೆದೊಯ್ಯಲಾಗುತ್ತದೆ.
Watch this video:
ಅಲ್ಲಿ ಆ ಯುವಕನನ್ನು ಬಲಾತ್ಕಾರವಾಗಿ ನಗ್ನಗೊಳಿಸಿ ಫೋಟೋ ತೆಗೆಯಲಾಗುತ್ತದೆ. ಬಳಿಕ ಐದು ಲಕ್ಷದ ಬೇಡಿಕೆ ಇಡುತ್ತಾರೆ.
ಅಷ್ಟು ಹಣ ಇಲ್ಲದ ಕಾರಣ ಆ ಯುವಕ ತಾನು ಬಂದಿದ್ದ ಕಾರನ್ನೇ ಅವರ ಬಳಿ ಒತ್ತೆ ಇಡುತ್ತಾನೆ. ಇಷ್ಟಕ್ಕೆ ತೃಪ್ತರಾದ ಈ ಹನಿಟ್ರ್ಯಾಪ್ ಪಾತಕಿಗಳು ಹಣಕ್ಕಾಗಿ ಆ ಯುವಕನಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಾರೆ. ಈ ಕಿರುಕುಳ ಹೆಚ್ಚಾದಾಗ ಆತ ಸಿಸಿಬಿ ಪೊಲೀಸರ ಮೊರೆ ಹೋಗುತ್ತಾನೆ.
ಈ ಮಾಹಿತಿಯನ್ನು ಆಧರಿಸಿ ಸಿಸಿಬಿ ಪೊಲೀಸರು ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಬಂಧಿಸುತ್ತಾರೆ.
ಬಂಧಿತರನ್ನು ಸುರತ್ಕಲ್ ಕೃಷ್ಣಾಪುರದ ಇಬ್ಬರು ಮಹಿಳೆಯರಾದ ರೇಶ್ಮಾ ಯಾನೆ ಸೀಮಾ, ಝೀನತ್ ಯಾನೆ ಝೀನತ್ ಮುಬಿನ್, ನಾಸಿಕ್ ಯಾನೆ ಅಬ್ದುಲ್ ಖಾದರ್ ನಾಸಿಫ್ ಮತ್ತು ಇಕ್ಬಾಲ್ ಮೊಹಮ್ಮದ್ ಯಾನೆ ಇಕ್ಬಾಲ್ ಎಂದು ಗುರುತಿಸಲಾಗಿದೆ.
ಮೇಲ್ನೋಟಕ್ಕೆ ರೇಷ್ಮಾ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರೆ, ಝೀನತ್ ಇನ್ಸೂರೆನ್ಸ್ ಕಂಪೆನಿಯ ಏಜೆಂಟ್ ಆಗಿದ್ದಾರೆ. ಇನ್ನಿಬ್ಬರು ಪಾತಕಿಗಳು ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಬಂಧಿತರು ಈ ಹಿಂದೆಯೂ ಹಲವು ಯುವಕರನ್ನು ತಮ್ಮ ಫೇಸ್‌ಬುಕ್ ಜಾಲದ ಮೂಲಕ ಯುವತಿಯರ ಆಮಿಷವೊಡ್ಡಿ ತಮ್ಮ ಮೋಹಜಾಲಕ್ಕೆ ಸಿಲುಕಿಸಿ ಹನಿಟ್ರ್ಯಾಪ್ ಮಾಡಿದ್ದಾರೆ ಎನ್ನಲಾಗಿದೆ.
ಈ ದುಡ್ಡಿನಿಂದ ಆರೋಪಿಗಳು ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಇನ್ನಷ್ಟು ಮಂದಿ ಈ ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.