-->
Inter-State dacoity team arrested | ಶೃಂಗೇರಿ, ಕೊಲ್ಲೂರು, ಕಟೀಲು ಸಹಿತ ದೇವಾಲಯಗಳಲ್ಲಿ ಕಳ್ಳತನ; ಕಳ್ಳರ ತಂಡದ ಬಂಧನ

Inter-State dacoity team arrested | ಶೃಂಗೇರಿ, ಕೊಲ್ಲೂರು, ಕಟೀಲು ಸಹಿತ ದೇವಾಲಯಗಳಲ್ಲಿ ಕಳ್ಳತನ; ಕಳ್ಳರ ತಂಡದ ಬಂಧನ

ಗದಗ ಬೆಟಗೇರಿಯ ಅಂತಾರಾಜ್ಯ ಕಳ್ಳರ ತಂಡ

ದೇವಸ್ಥಾನಗಳೇ ಇವರ ಟಾರ್ಗೆಟ್...

ಭಕ್ತರೇ ಇವರ ಹೊಂಚಿನ ಕೇಂದ್ರ







ದೇವಸ್ಥಾನಗಳೇ ಇವರ ಟಾರ್ಗೆಟ್... ಭಕ್ತರೇ ಇವರ ಹೊಂಚಿನ ಕೇಂದ್ರ. ತಂಡವಾಗಿ ಬಂದು ಭಕ್ತರನ್ನು ದೋಚಿ ಕ್ಷಣಾರ್ಧದಲ್ಲಿ ಮಾಯವಾಗುತ್ತಿದ್ದ ಮಹಾ ಕಿರಾತಕ ಕಳ್ಳರ ತಂಡವನ್ನು ಮಂಗಳೂರಿನ ಬಜಪೆ ಪೊಲೀಸರು ಭೇದಿಸಿದ್ದಾರೆ.


ಜನವರಿ 12ರಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಬಂದಿದ್ದ ಭಕ್ತರೊಬ್ಬರನ್ನು ದೋಚಿ ಪರಾರಿಯಾಗುತ್ತಿದ್ದ ಈ ಕಳ್ಳರ ತಂಡವನ್ನು ಪೊಳಲಿ ದ್ವಾರದಲ್ಲಿ ಬಜಪೆ ಪೊಲೀಸರು ಬಂಧಿಸಿದ್ದಾರೆ.


ಬಂಧಿತರನ್ನು ಗದಗ ಬೆಟಗೇರಿ ನಿವಾಸಿ ಯಮುನವ್ವ ಮುತ್ತಪ್ಪ ಛಲವಾದಿ(55), ಗದಗ ಗಂಗರಪುರ ಪೇಟೆಯ ಪ್ರಕಾಶ್ ಚೆನ್ನಪ್ಪ ಹೊಳೆಯ ಮೆಣಸಿಗೆ (೨೬), ಗದಗ ಬೆಟಗೇರಿಯ ಶೋಭಾ ಮುಟ್ಟಗಾರ, (೪೦), ಗದಗ ಬೆಟಗೇರಿಯ ಸಬ್ ಜೈಲ್ ರಸ್ತೆಯ ಕುಮಾರಮ್ಮ ಮಾರುತಿ ಮುಟ್ಟಗಾರ (೪೫), ಗದಗ ಸೆಟ್ಲಮೆಂಟ್ ಪ್ರದೇಶದ ಶಾಂತಮ್ಮ (೫೫), ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಚಂದ್ರಶೇಖರ ಶಿವರೆಡ್ಡೆಪ್ಪ ಕರಮುಡಿ (೪೯) ಎಂದು ಗುರುತಿಸಲಾಗಿದೆ.









ಬಂಧಿತರಿಂದ 75 ಸಾವಿರ ನಗದು ಸೇರಿದಂತೆ 7 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.


ಘಟನೆಯ ವಿವರ


ಕಟೀಲು ದೇವಸ್ಥಾನದಲ್ಲಿ ಮಹಿಳಾ ಭಕ್ತರೊಬ್ಬರನ್ನು ದೋಚಿ ಪರಾರಿಯಾಗುತ್ತಿದ್ದಂತೆ ಭಕ್ತರು ತಮ್ಮ ಅಳಿಯ ಮತ್ತು ಇತರರಿಗೆ ಮಾಹಿತಿ ತಿಳಿಸಿದರು. ಅವರು ಆರೋಪಿಗಳನ್ನು ಹಿಂಬಾಲಿಸಿದಾಗ ಆರೋಪಿಗಳು ತೂಫಾನ್ ವಾಹನದಲ್ಲಿ ಪರಾರಿಯಾದರು ಎಂಬುದು ತಿಳಿಯಿತು.


ತಕ್ಷಣ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಈ ಕುರಿತ ಖಚಿತ ಮಾಹಿತಿಯನ್ನು ಅನುಸರಿಸಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪೊಳಲಿ ದ್ವಾರದ ಬಳಿ ಆರೋಪಿಗಳನ್ನು ಬಂಧಿಸಲಾಯಿತು.


ಕಾರ್ಯಾಚರಣೆಯ ವೇಳೆ ಪೊಲೀಸರು ತೂಫಾನ್ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ್ದರು. ಆರೋಪಿಗಳು ತೂಫಾನ್ ವಾಹನ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದಾಗ ಬಂಧಿಸಲಾಯಿತು.



ಹೆಚ್ಚಿನ ವಿಚಾರಣೆ ವೇಳೆ, ಆರೋಪಿಗಳು ಶೃಂಗೇರಿ ಶಾರದಾ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಹಳೆ ಗೋವಾದ ಶಾಂತದುರ್ಗಾ ದೇವಸ್ಥಾನ, ಗೋಕರ್ಣ ಗಣಪತಿ ದೇವಸ್ಥಾನ, ಇಡಗುಂಜಿ, ಮುರುಡೇಶ್ವರ ಹಾಗೂ ಇತರ ಪ್ರಮುಖ ದೇವಸ್ಥಾನಗಳಲ್ಲಿ ಇದೇ ರೀತಿಯಾಗಿ ಭಕ್ತರನ್ನು ದೋಚುತ್ತಿದ್ದರು ಎಂದು ಹೇಳಲಾಗಿದೆ.



ಆರೋಪಿಗಳ ಬಂಧನದ ಸಂದರ್ಭದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಹಾಗೂ ವಿನಯ್ ಗಾಂವ್ಕರ್, ಎಸಿಪಿ ಬೆಳ್ಳಿಯಪ್ಪ ಅಭಿನಂದಿಸಿದ್ದಾರೆ.


ಇನ್ಸ್‌ಪೆಕ್ಟರ್ ಕೆ.ಆರ್. ನಾಯ್ಕ್‌, ಪಿಎಸ್‌ಐ ಪೂವಪ್ಪ, ರಾಘವೇಂದ್ರ ನಾಯ್ಕ್, ಎಎಸ್‌ಐ ರಾಮ ಪೂಜಾರಿ, ಲಕ್ಷ್ಮಣ ಗೌಡ, ಸುಧೀರ್ ಶೆಟ್ಟಿ, ಸಂತೋಷ್ ಡಿ.ಕೆ. ಗಿರೀಶ್ ಯು, ಹೊನ್ನಪ್ಪ ಗೌಡ, ಪುರುಷೋತ್ತಮ, ರಾಜೇಶ್, ವಕೀಲ ಎನ್. ಲಮಾಣಿ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Ads on article

Advertise in articles 1

advertising articles 2

Advertise under the article