man arrested for his wife's murder | ಕುಡಿತ ತಂದ ಆಪತ್ತು!- ಮತ್ತಿನಲ್ಲಿ ತನ್ನ ಪತ್ನಿಯನ್ನೇ ಕೊಚ್ಚಿದ ಹಾಕಿದ ಪಾಪಿ
ಕುಡಿತದ ಮತ್ತು ತಂದಿತು ಆಪತ್ತು... ಇದು ದಕ್ಷಿಣ ಕನ್ನಡದ ಬೆಳ್ತಂಗಡಿಯ ಪಾಪಿ ಗಂಡನ ಕಥೆ. ಇಲ್ಲಿನ ನೆರಿಯಾದ ಗಂಡಿ ಬಾಗಿಲು ಗ್ರಾಮದ ಫ್ರಾನ್ಸಿಸ್ ಎಂಬಾತನಿಗೆ ವಿಪರೀತ ಕುಡಿಯುವ ಚಟ.
ಕೇರಳ ಮೂಲದ ಫ್ರಾನ್ಸಿಸ್ ತನ್ನ ಪತ್ನಿ ಸೌಮ್ಯಾ ಫ್ರಾನ್ಸಿಸ್‌ಳನ್ನೇ ಕೊಲೆ ಮಾಡಿದ್ದಾನೆ.
ಈ ದಂಪತಿ ಇಲ್ಲಿನ ತೋಟವೊಂದರಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಿ ಜೀವನ ನಡೆಸುತ್ತಿದ್ದರು. ಪ್ರತಿನಿತ್ಯ ಇವರಿಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ನಿನ್ನೆ ರಾತ್ರಿ ಕೂಡ ಎಂದಿನಂತೆ ಕುಡಿದು ಆತ ತನ್ನ ಪತ್ನಿ ಜೊತೆ ಜಗಳ ಮಾಡಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಮರದ ತುಂಡಿನಿಂದ ತಲೆ ಮತ್ತು ಮೈಕೈಗೆ ಮನಬಂದಂತೆ ಹೊಡೆದುಹಾಕಿದ್ದಾನೆ.
ಘಟನೆಯಿಂದ ಸೌಮ್ಯಳಿಗೆ ತೀವ್ರ ಗಾಯಗಳಾಗಿದ್ದು, ಆಕೆಯನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ಧಾರೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಆಕೆ ಮೃತಪಟ್ಟಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮೃತ ಮಹಿಳೆಯ ಸಹೋದರ ಸನೋಜ್ ಫ್ರಾನ್ಸಿಸ್ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.