-->
Bajpe Police arrested Notorious Gang | ದರೋಡೆ, ದನ ಕಳ್ಳತನವೇ ಇವರ ನಿತ್ಯಕೆಲಸ: ನಟೋರಿಯಸ್ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಜಪೆ ಪೊಲೀಸರು

Bajpe Police arrested Notorious Gang | ದರೋಡೆ, ದನ ಕಳ್ಳತನವೇ ಇವರ ನಿತ್ಯಕೆಲಸ: ನಟೋರಿಯಸ್ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಜಪೆ ಪೊಲೀಸರು




ಮಂಗಳೂರು: ಕರಾವಳಿ ಭಾಗದಲ್ಲಿ ದರೋಡೆ ಮತ್ತು ದನಗಳವು ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಜಪೆ ಪೊಲೀಸರು.


ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿ ದರೋಡೆ ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದ ಕುಖ್ಯಾತ ಕಳ್ಳರ ತಂಡವನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಬಜಪೆ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.


ಬಂಧಿತರಿಂದ ವಿವಿಧ ಅಪರಾಧ ಕೃತ್ಯಗಳಿಗೆ ಬಳಿಸಿರುವ ಪಿಕ್ ಅಪ್ ವಾಹನ 1, ಬೈಕ್ 2, ಕಬ್ಬಿಣದ ಕತ್ತಿ, ಚೂರಿ, ಕಬ್ಬಿಣದ ಹುಕ್ಕು, ಮರದ ದಿಮ್ಮಿ, ಮೆಣಸಿನ ಹುಡಿ ಪ್ಯಾಕೇಟ್ 1, ಮೊಬೈಲ್ ಫೋನ್ 4, 2 ಜೀವಂತ ದನಗಳನ್ನು ಮತ್ತು ದನವನ್ನು ಮಾರಾಟ ಮಾಡಿದ ರೂ. 15,000/- ಸಮೇತ ಒಟ್ಟು 6 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳು ಮೂಡಬಿದ್ರೆ, ಎಡಪದವು, ಮಿಜಾರು, ಗಂಜಿಮಠ ಕಡೆಗಳಲ್ಲಿ ದನಗಳನ್ನು ಕೈಕಾಲು ಕಟ್ಟಿ ಕಳ್ಳತನ ಮಾಡಿ ಕೊಂಡುಹೋಗುತ್ತಿದ್ದು, ಕಳ್ಳತನ ಮಾಡಲು ಯಾರಾದರೂ ವ್ಯಕ್ತಿಗಳು ಪ್ರತಿರೋದ ವ್ಯಕ್ತಪಡಿಸಿದಲ್ಲಿ ಅವರ ಕಣ್ಣಿಗೆ ಮೆಣಸಿನಹುಡಿಯನ್ನು ಹಾಕಿ ಚೂರಿಯನ್ನು ತೋರಿಸಿ ಹೆದರಿಸಿರುವುದಾಗಿ ತೀವ್ರ ವಿಚಾರಣೆ ವೇಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.


ಈ ಖತರ್ನಾಕ್ ಗ್ಯಾಂಗ್ ನ ಪ್ರಮುಖ ವ್ಯಕ್ತಿ ಎನ್ನಲಾದ ಅದ್ಯಪಾಡಿ ಮನ್ಸೂರು, ತೋಡಾರು ಫಾಯಿಜ್ ಆಲಿಯಾಸ್ ಬೆಬ್ಬೆ ಫೈಜ್, ಜುಬೈರ್ ತೋಡಾರು, ಇರ್ಷಾದ್ ಮತ್ತು ನೌಫಾಲ್ ಗಂಜಿಮಠ ಪರಾರಿಯಾಗಿದ್ದಾರೆ. ಪೊಲೀಸರ ದಾಳಿ ವೇಳೆ ಅವರು ತಪ್ಪಿಸಿಕೊಂಡು ಓಡಿಹೋಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ.

ಬಂಧಿತ ಆರೋಪಿಗಳ ವಿವರ ಹೀಗಿದೆ.

ಬಂಟ್ವಾಳ ಮೂಲರಪಟ್ಣದ ನಿವಾಸಿ 33 ವರ್ಷ ಪ್ರಾಯದ ಅಬ್ದುಲ್ ಹಕೀಂ ಯಾನೆ ಬೊಗ್ಗು

ಬಂಟ್ವಾಳ ಮೂಲರಪಟ್ಣದ ನಿವಾಸಿ 45 ವರ್ಷ ಪ್ರಾಯದ ಅಬ್ದುಲ್ ರಜಾಕ್

ಬಂಟ್ವಾಳ ಮೂಲರಪಟ್ಣದ ನಿವಾಸಿ 42 ವರ್ಷ ಪ್ರಾಯದ ಮೊಹಮ್ಮದ್ ರಫೀಕ್ ಯಾನೆ ನೌಶಾದ್ ರಫೀಕ್

ಬಂಟ್ವಾಳ ಮೂಲರಪಟ್ಣದ ನಿವಾಸಿ 29 ವರ್ಷ ಪ್ರಾಯದ ಮೊಹಮ್ಮದ್ ಮನ್ಸೂರು ಆಲಿಯಾಸ್ ಮಂಚು

ಬಂಟ್ವಾಳ ಮೂಲರಪಟ್ಣದ ನಿವಾಸಿ 31 ವರ್ಷ ಪ್ರಾಯದ ರ್ಫಾನ್


ಆರೋಪಿಗಳು ಇತ್ತೀಚೆಗೆ ಬಡಗ ಎಡಪದವು ಗ್ರಾಮದ ವರಣ್ ತಂತ್ರಿ ಮತ್ತು ಶ್ರೀಮತಿ ಮೋಹಿಣಿ ರವರ 2 ದನಗಳನ್ನು ಕಳವು, ಗಂಜಿಮಠ ಹೊಸನ್ನ ಡಿಸಿಲ್ವ ರವರ 3 ದನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ.


ಆರೋಪಿಗಳ ಪೈಕಿ ಅಬ್ದುಲ್ ಹಕೀಂ ಯಾನೆ ಬೊಗ್ಗು ಎಂಬಾತನ ಮೇಲೆ ಮೂಡಬಿದ್ರೆ, ಬಜಪೆ, ಕಾವೂರು, ಬಂಟ್ವಾಳ ಕಡೆಗಳಲ್ಲಿ ಒಟ್ಟು 5 ವಿವಿಧ ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೆ, ಇತ್ತೀಚೆಗೆ ಮೂಡಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ದನಗಳನ್ನು ಕಳ್ಳತನ ಮಾಡಿ ಕೊಂಡು ಹೋಗುವಾಗ ಪೊಲೀಸರು ದಾಳಿ ನಡೆಸಿದಾಗ, ಪೊಲೀಸರ ಮೇಲೆ ಕೊಲೆಯತ್ನ ನಡೆಸಿ ಪೊಲೀಸರ ಫೈರಿಂಗ್ ನಲ್ಲಿ ತಪ್ಪಿಸಿಕೊಂಡಿರುವ ಕುಖ್ಯಾತ ಆರೋಪಿಯಾಗಿರುತ್ತಾನೆ.


ತಲೆ ಮರೆಸಿಕೊಂಡಿರುವ ಕುಖ್ಯಾತ ಆರೋಪಿ ಮನ್ಸೂರು ಅದ್ಯಪಾಡಿ ಎಂಬಾತನ ಮೇಲೆ ಇದುವರೆಗೆ ಹಲವು ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಮಂಗಳೂರು ನಗರ, ದಕ್ಷಿಣ ಕನ್ನಡ, ಕೊಡಗು, ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಟ್ಟು 15 ಕ್ಕಿಂತಲೂ ಹೆಚ್ಚು ವಿವಿಧ ಪ್ರಕರಣಗಳು ದಾಖಲಾಗಿರುತ್ತವೆ.

Ads on article

Advertise in articles 1

advertising articles 2

Advertise under the article