all praise for Police action | ಬೀಫ್ ಸ್ಟಾಲ್‌ಗೆ ಬೆಂಕಿ: ಆರೋಪಿ ಬಂಧನ- ಪೊಲೀಸರ ಕಾರ್ಯಾಚರಣೆಗೆ ಅಭಿನಂದನೆ
ಉಳ್ಳಾಲ : ಕೆಲವು ದಿನಗಳ ಹಿಂದೆ ಉಳ್ಳಾಲದ ತೊಕ್ಕೋಟು ಒಳ ಪೇಟೆಯ ತಾತ್ಕಾಲಿಕ ಬೀಟ್ ಸ್ಟಾಲ್ ಗಳಿಗೆ ಬೆಂಕಿ ಕೊಟ್ಟು ದ್ವಂಸಗೊಳಿಸಿದ ದುಷ್ಕರ್ಮಿ ನಾಗರಾಜ್ ಎಂಬಾತನನ್ನು ಬಂಧಿಸುವ ಮೂಲಕ ಪೋಲಿಸ್ ಕಮೀಷನರ್ ಮತ್ತು ಉಳ್ಳಾಲ ಪೋಲಿಸ್ ಠಾಣಾಧಿಕಾರಿಗಳು ಉಳ್ಳಾಲದ ಶಾಂತಿ ಪ್ರಿಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ದ.ಕ.ಜಿಲ್ಲಾಕಾಂಗ್ರೆಸ್ ವಕ್ತಾರ ಶ್ರೀ ಫಾರೂಕ್ ಉಳ್ಳಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೋಲಿಸರ ಕರ್ತವ್ಯ ಕ್ಕೆ ಸವಾಲೊಡ್ಡಿದ ಈ ಪ್ರಕರಣವನ್ನು ಪತ್ತೆ ಹಚ್ಚಿರುವುದರಿಂದ ಅಭದ್ರತೆಯಿಂದ ವ್ಯಾಪಾರ ನಡೆಸುವ ಬೀಫ್ ಸ್ಟಾಲ್ ಗಳ ಮಾಲ್ಹಕರ ಸಹಿತ ಇತರೆಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಧೈರ್ಯ ವಿಶ್ವಾಸ ತುಂಬಿದಂತಾಗಿದೆ ಎಂದೂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಫಾರೂಕ್ ಉಳ್ಳಾಲ್, ಮಂಗಳೂರು ಪೋಲಿಸ್ ಕಮೀಷನರ್ ಶ್ರೀ ಶಶಿಕುಮಾರ್ ಮತ್ತು ಉಳ್ಳಾಲ ಪೋಲಿಸ್ ಠಾಣಾಧಿಕಾರಿ ಶ್ರೀ ಸಂದೀಪ್ ಮತ್ತು ತಂಡ ನೀಡಿದ ವಾಗ್ದಾನದಂತೆ ಆರೋಪಿ ನಾಗರಾಜ್ ನನ್ನು ಬಂಧಿಸಿರುವುದು ನೆಮ್ಮದಿಗೆ ಪೂರಕವಾಗಿದೆ. ಆರೋಪಿಯನ್ನು ಹೆಚ್ಚಿನ ತನಿಖೆಗೊಳಪಡಿಸಿದರೆ ಪತ್ತೆಯಾಗದೆ ಉಳಿದಿರುವ ಹಲವು ಕೃತ್ಯಗಳು ಬಯಲಾಗುವ ಸಾಧ್ಯತೆ ಎಂದು ಹೇಳಿದ್ದಾರೆ.
ನಾಡಿನ ಸ್ವಾಸ್ಥ್ಯವನ್ನು ಕೆಡಿಸಬಲ್ಲ ದುಷ್ಕರ್ಮಿಗಳ ಮೂಲೋತ್ಪಾಟನೆಯನ್ನು ಇಂತಹ ದಕ್ಷ- ಪ್ರಾಮಾಣಿಕ ಅಧಿಕಾರಿಗಳಿಂದ ನಿರೀಕ್ಷಿಸ ಬಹುದು ಎಂದೂ ಶ್ರೀ ಫಾರೂಕ್ ಉಳ್ಳಾಲ್ ತನ್ನ ಹೇಳಿಕೆಯಲ್ಲಿ ಆಶಾವಾದ ವ್ಯಕ್ತಪಡಿಸಿದ್ದಾರೆ.