Manoj Rachappa come out from Praja TV | ಪ್ರಜಾಟಿವಿಗೆ ಗುಡ್‌ಬೈ ಹೇಳಿದ ಹಿರಿಯ ಪತ್ರಕರ್ತ ಮನೋಜ್
ದಶಕಗಳ ಕಾಲ ದೃಶ್ಯ ಮಾಧ್ಯಮದಲ್ಲಿ ಮುಂಚೂಣಿಯಲ್ಲಿದ್ದು ಸೇವೆ ಸಲ್ಲಿಸಿರುವ ಮನೋಜ್ ರಾಚಪ್ಪ ಪ್ರಜಾ ಟಿವಿಯಿಂದ ಹೊರಬಂದಿದ್ದಾರೆ. ಆರು ವರ್ಷಗಳ ಅವರ ಸೇವೆಗೆ ಅಂತ್ಯವಾಡಿದ್ದಾರೆ.
ಅವರೇ ಈ ವಿಷಯವನ್ನು ಸಾಮಾಜಿಕ ತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಅವರ ಸಂದೇಶದ ಪೂರ್ಣ ಪಾಠ ಹೀಗಿದೆ.
"ಪ್ರೀತಿಯಿಂದ ಕಟ್ಟಿ ಬೆಳೆಸಿದ ‘ಪ್ರಜಾಟಿವಿ’ಯಿಂದ ಹೊರಬಂದಿದ್ದೇನೆ. ಭಾರವಾದ ಹೃದಯದಿಂದ ಪ್ರಜಾ ತಂಡಕ್ಕೆ ವಿದಾಯ ಹೇಳುತ್ತಿದ್ದೇನೆ. 6 ವರ್ಷಗಳ ಪ್ರಜಾ ಜೊತೆಗಿನ ಪಯಣ ಅಂತ್ಯಗೊಂಡಿದೆ. ಬಹಳಷ್ಟು ಏರಿಳಿತಗಳ ನಡುವೆಯೂ ನನಗೆ ಪ್ರೀತಿ ತೋರಿ ಸಹಕಾರ ನೀಡಿದ ನನ್ನ ತಂಡಕ್ಕೆ ಸದಾ ಚಿರಋಣಿ. ನನ್ನ ಮೇಲೆ ನಂಬಿಕೆ ಇಟ್ಟು ಸಂಸ್ಥೆ ಮುನ್ನಡೆಸಲು ಅವಕಾಶ ಕೊಟ್ಟ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಅವರಿಗೂ ನಾನು ಆಭಾರಿಯಾಗಿದ್ದೇನೆ. ಒಂದು ಕುಟುಂಬದಂತೆ ಇದ್ದ ನ್ಯೂಸ್ ರೂಂ ನಲ್ಲಿ ನನ್ನಿಂದ ಯಾರಿಗಾದ್ರೂ ನೋವಾಗಿದ್ದರೆ ಕ್ಷಮೆ ಇರಲಿ.. ಪ್ರಜಾಟಿವಿ ಕಟ್ಟುವಾಗ ಜೊತೆಯಲ್ಲಿ ನಿಂತವರು, ಕೊನೆ ತನಕ ಸಾಥ್ ನೀಡಿದವರು ಮತ್ತು ಮಧ್ಯೆದಲ್ಲಿ ಬಂದು ಹೆಗಲು ಕೊಟ್ಟು ನಾವಿದ್ದೇವೆ ಸಾರ್ ಅಂತಾ ಆತ್ಮವಿಶ್ವಾಸ ತುಂಬಿದವರನ್ನು ಹೃದಯಲ್ಲಿಟ್ಟು ಮುಂದೆ ಹೆಜ್ಜೆ ಇಡಲು ನಿರ್ಧರಿಸಿದ್ದೇನೆ. ಮತ್ತೆ ನಿಮ್ಮೆಲ್ಲರ ಜೊತೆ ಕೆಲಸ ಮಾಡುವ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ. ಪ್ರಜಾಟಿವಿ ತಂಡಕ್ಕೆ ಒಳ್ಳೆಯಾದಾಗಲಿ.
ಸದಾ ನಿಮ್ಮವ,
ಮನೋಜ್"