-->
Ravindra Shetty Ulidottu | ಪಡುಪೆರಾರದಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನರಿಗೆ ಮಾಹಿತಿ ಶಿಬಿರ, ಹಕ್ಕುಪತ್ರ ವಿತರಣೆ

Ravindra Shetty Ulidottu | ಪಡುಪೆರಾರದಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನರಿಗೆ ಮಾಹಿತಿ ಶಿಬಿರ, ಹಕ್ಕುಪತ್ರ ವಿತರಣೆ






ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಮಾಹಿತಿ ಶಿಬಿರ ಮತ್ತು ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.



ಪಡುಪೆರಾರು ಪಂಚಾಯತ್ ಸಂಕೀರ್ಣದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿಯವರು ವಹಿಸಿದ್ದರು.


ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ವೈ ಭರತ್ ಶೆಟ್ಟಿ ಹಕ್ಕು ಪತ್ರ ವಿತರಿಸಿದರು.


ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ , ದ. ಕ ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾಧಿಕಾರಿ ಸಚಿನ್, ಮಂಗಳೂರು ತಾಲ್ಲೂಕು ಅಧಿಕಾರಿ ಮಹಾಲಕ್ಷ್ಮಿ , ಸಂಪನ್ಮೂಲ ವ್ಯಕ್ತಿಯಾಗಿ ವಿಜಯಲಕ್ಷ್ಮಿ ಕಟೀಲು ಭಾಗವಹಿಸಿದ್ದರು.







ಸ್ಥಳೀಯ ಪಂಚಾಯತ್ ಸದಸ್ಯೆ ವಿದ್ಯಾ ಜೋಗಿ ಧನ್ಯವಾದ ನೀಡಿದರು, ಕೆ.ರಾಧೇಶ್ ಕಾರ್ಯಕ್ರಮ ನಿರೂಪಿಸಿದರು.





Ads on article

Advertise in articles 1

advertising articles 2

Advertise under the article