Thantre Thant- BJP MLA reply | "ತಾಂಟ್ರೆ ಬಾ ತಾಂಟ್" ಮತ್ತೆ ಸದ್ದು: ಉಜಿರೆಯಲ್ಲಿ ಶಾಸಕ ಪೂಂಜಾ ತಾಂಟ್ರೆಗೆ ಸವಾಲು...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿದ್ದ ನೀ ತಾಂಟ್ರೆ ಬಾ ತಾಂಟ್ ಮತ್ತೆ ಸದ್ದು ಮಾಡಿದೆ.
ಬಿ.ಜೆ.ಪಿ. ಬೆಳ್ತಂಗಡಿ ಮಂಡಲದ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಸದಸ್ಯರುಗಳಿಗೆ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಅಭಿನಂದನಾ ಸಮಾರಂಭ ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆಯಿತು.
ಗ್ರಾಮ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್ ಈಶ್ವರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉಜಿರೆಯ ನೆಲದಲ್ಲೇ ತಾಂಟ್ರೆಗೆ ಸವಾಲು ಹಾಕಿದ ಬಿಜೆಪಿ ಶಾಸಕ ಹರೀಶ್ ಪೂಂಜ ಬಿಜೆಪಿ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರರಾದರು.
ನಾವು ಯಾರ ಜೊತೆಗೂ ತಾಂಟುವುದಿಲ್ಲ. ಆದರೆ, ಲವ್ ಜಿಹಾದ್, ಭಯೋತ್ಪಾದಕರು, ಗೋಹತ್ಯೆ ಮಾಡುವವರೊಂದಿಗೆ ತಾಂಟಲು ಸಿದ್ಧ ಎಂದು ಅವರು ಪ್ರತಿ ಸವಾಲು ಹಾಕಿದರು.
ಐದು ವರ್ಷಗಳಲ್ಲಿ ನವ ಬೆಳ್ತಂಗಡಿ ನಿರ್ಮಾಣ ಮಾಡಲು ನಾವು ಕಟಿಬದ್ಧರಾಗಿದ್ದೇವೆ ಎಂದು ಹೇಳಿದ ಅವರು, ಬೆಳ್ತಂಗಡಿಯ 46 ಗ್ರಾಮ ಪಂಚಾಯಿತಿಗಳ ಪೈಕಿ ಸುಮಾರು 40 ಗ್ರಾಮ ಪಂಚಾಯಿತಿಗಳಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಇನ್ನು 13 ಗ್ರಾಮ ಪಂಚಾಯಿತಿಗಳು ಕಾಂಗ್ರೆಸ್ ಮುಕ್ತವಾಗಿವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.