Weekly off compulsory in police department | ರಾಜ್ಯ ಪೊಲೀಸರಿಗೆ ಸಿಹಿ ಸುದ್ದಿ: ಇನ್ನು ವಾರದ ರಜೆ ಕಡ್ಡಾಯ- ಪ್ರವೀಣ್ ಸೂದ್ ಆದೇಶ
Friday, January 29, 2021
ಬೆಂಗಳೂರು: ರಾಜ್ಯ ಪೊಲೀಸರಿಗೆ ಸಿಹಿ ಸುದ್ದಿ. ಇನ್ನು ಅವರಿಗೆ ವಾರದ ರಜೆ ಕಡ್ಡಾಯ. ಈ ಬಗ್ಗೆ ಪೊಲೀಸ್ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಬಗ್ಗೆ ಎಲ್ಲ ಪೊಲೀಸ್ ಕಾರ್ಯಾಲಯಕ್ಕೆ ಸುತ್ತೋಲೆಯನ್ನು ಕಳುಹಿಸಿದ್ದು, ಎಲ್ಲ ಸಿಬ್ಬಂದಿ ವಾರದ ರಜೆಯನ್ನು ಕಡ್ಡಾಯವಾಗಿ ತೆಗೆಯಬೇಕು ಎಂದು ಸೂಚಿಸಿದ್ದಾರೆ.
ತುರ್ತು ಪರಿಸ್ಥಿತಿ ಮತ್ತು ಇತರ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಈ ರಜೆ ಕಡ್ಡಾಯ ಆದೇಶ ಅನ್ವಯವಾಗಲಿದೆ.
ಇತ್ತೀಚೆಗೆ ಕೆಲ ಪೊಲೀಸ್ ಸಿಬ್ಬಂದಿ ತಮ್ಮ ಮೇಲಾಧಿಕಾರಿಗಳು ತಮಗೆ ವಾರದ ರಜೆಯನ್ನು ತೆಗೆಯಲು ಅವಕಾಶ ನೀಡುತ್ತಿಲ್ಲ ಎಂದು ದೂರು ನೀಡಿದ್ದರು.
ಈ ಕುರಿತ ಗೌಪ್ಯ ಮಾಹಿತಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ತಿಳಿದ ಕೂಡಲೇ ಈ ಕುರಿತು ಅವರು ಸುತ್ತೋಲೆಯನ್ನು ಹೊರಡಿಸಿದ್ದಾರೆ.