
Domestic Air ticket relaxed | ಲಗ್ಗೇಜ್ ರಹಿತರಿಗೆ ವಿಮಾನ ಯಾನ ಅಗ್ಗ: ದೇಶೀ ಪ್ರಯಾಣಿಕರಿಗೆ ಶುಭಸುದ್ದಿ
Saturday, February 27, 2021
ವಿಮಾನ ಯಾನದದ ಟಿಕೆಟ್ ದರ ಇನ್ನು ಮುಂದೆ ಸ್ವಲ್ಪ ಅಗ್ಗವಾಗಲಿದೆ. ಲಗ್ಗೇಜ್ ಇಲ್ಲದ ಅಥವಾ ಕೇವಲ ಕ್ಯಾಬಿನ್ ಬ್ಯಾಗೇಜ್ ಹೊಂದಿರುವ ಪ್ರಯಾಣಿಕರಿಗೆ ದೇಶೀ ವಿಮಾನಯಾನದಲ್ಲಿ ರಿಯಾಯಿತಿ ನೀಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ- ಡಿಜಿಸಿಎ ವೈಮಾನಿಕ ಕಂಪೆನಿಗಳಿಗೆ ಅವಕಾಶ ನೀಡಿದೆ.
ಅತಿ ಕಡಿಮೆ ಬ್ಯಾಗೇಜ್ ಅಥವಾ ಲಗ್ಗೇಜ್‌ನೊಂದಿಗೆ ಡೊಮೆಸ್ಟಿಕ್ ಅಂದರೆ ದೇಶದ ಒಳಗೆ ಪ್ರಯಾಣ ಮಾಡುವ ವಿಮಾನಯಾನಿಕರಿಗೆ ಈ ರಿಯಾಯಿತಿ ಶೀಘ್ರದಲ್ಲೇ ಆರಂಭವಾಗಲಿದೆ.
ಪ್ರಸ್ತುತ, ಏಳು ಕೆ.ಜಿ. ತೂಕದ ಕ್ಯಾಬಿನ್ ಲಗ್ಗೇಜ್ ಮತ್ತು 15 ಕೆ.ಜಿ. ತೂಕದ ಚೆಕ್ ಇನ್ ಬ್ಯಾಗೇಜ್‌ಗಳನ್ನು ಕರೆದೊಯ್ಯಲು ಪ್ರಯಾಣಿಕರಿಗೆ ಅವಕಾಶವಿದೆ. ಹೆಚ್ಚುವರಿ ಲಗ್ಗೇಜ್ ಅಥವಾ ಬ್ಯಾಗೇಜ್‌ಗೆ ಶುಲ್ಕವಿದೆ.
ರಿಯಾಯಿತಿ ಪಡೆಯಬೇಕಾದರೆ, ಪ್ರಯಾಣಿಕರು ತಮ್ಮ ಟಿಕೆಟ್ ಬುಕ್ಕಿಂಗ್ ಸಮಯದಲ್ಲಿ ಮಾಹಿತಿ ನೀಡಬೇಕು.