Allahabad High Court | ವಧು ಅಪ್ರಾಪ್ತೆಯಾಗಿದ್ದರೆ ಪತಿ ಜೊತೆ ಇರಲು ಕಾನೂನು ಸಮ್ಮತಿ ಇಲ್ಲ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು
ಅಲಹಾಬಾದ್: ಹಲವು ಮಹತ್ವದ ತೀರ್ಪುಗಳಿಗೆ ಮೈಲುಗಲ್ಲು ನಿರ್ಮಿಸಿರುವ ಅಲಹಾಬಾದ್ ಮತ್ತೊಂದು ಪ್ರಮುಖ ತೀರ್ಪು ಪ್ರಕಟಿಸಿದೆ. ವಿವಾಹಿತೆ ಅಪ್ರಾಪ್ತೆಯಾಗಿದ್ದರೆ ಆಕೆ ತನ್ನ ಪತಿ ಜೊತೆ ಇರಲು ಕಾನೂನು ಸಮ್ಮತಿ ಇರುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಮನೆಯವರ ಅನುಮತಿ ಇಲ್ಲದೆ ಅಪ್ರಾಪ್ತೆ ಮದುವೆಯಾಗಿದ್ದಲ್ಲಿ ಗಂಡನೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಈ ಮದುವೆಯನ್ನು ಒಪ್ಪಿಕೊಳ್ಳುವ ಅಥವಾ ಬೇರೆ ಯಾರೊಂದಿಗಾದರೂ ವಾಸಿಸಲು ಕಾನೂನು ಸರ್ವತಾ ಅವಕಾಶ ನೀಡದು ಎಂದು ಅದು ಹೇಳಿದೆ.
ವಿವಾಹಿತೆ ಪ್ರಾಪ್ತ ವಯಸ್ಕಳಾಗುವ ವರೆಗೆ ಮದುವೆಯನ್ನು ಒಪ್ಪಿಕೊಳ್ಳುವ ಅಥವಾ ಬೇರೆ ಯಾರೊಂದಿಗಾದರೂ ವಾಸಿಸಲು ಸ್ವತಂತ್ರಳು ಎಂದೂ ಮುನೀರಾದ ಬಾಲನ್ಯಾಯ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು. ಅದನ್ನು ಪ್ರಶ್ನಿಸಿ 2020ರ ನವೆಂಬರ್ 24ರಂದು ಅಪ್ರಾಪ್ರೆಯ ತಂದೆ ಹೈಕೋರ್ಟ್ ಮೊರೆ ಹೋಗಿದ್ದರು.
ಅವರ ಈ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಜೆಜೆ ನ್ಯಾಯಾಲಯದ ತೀರ್ಪು ಎತ್ತಿಹಿಡಿದು ಈ ಮಹತ್ವದ ತೀರ್ಪು ಪ್ರಕಟಿಸಿದೆ.
ಬಾಲಕಿಗೆ ಮದುವೆಯಾಗುವಾಗ 16 ವರ್ಷ ವಯಸ್ಸಾಗಿತ್ತು. ಪಿಂಟೋ ಎಂಬಾತ ಆಮಿಷವೊಡ್ಡಿ ತನ್ನ ಮಗಳನ್ನು ಮದುವೆಯಾಗಿದ್ದಾನೆ. ಆಗ ಆಕೆಗೆ 18 ತುಂಬಿರಲಿಲ್ಲ ಎಂದು ತಂದೆ ವಾದಿಸಿದ್ದರು.
ಸಾಕ್ಷಿ ಸಂದರ್ಭದಲ್ಲಿ ಅಪ್ರಾಪ್ತೆಗೆ ಮದುವೆಯ ವಯಸ್ಸಾಗಿರಲಿಲ್ಲ. ಆದರೆ, ತಾನು ತನ್ನ ಪತಿಯನ್ನು ಸ್ವ ಇಚ್ಚೆಯಿಂದ ಮದುವೆಯಾಗಿದ್ದು, ಹುಡುಗಿ ಪೋಷಕರೊಂದಿಗೆ ಹೋಗಲು ನಿರಾಕರಿಸಿದ್ದಾಳೆ.
ವಿಚಾರಣೆ ವೇಳೆ, ಕೋರ್ಟ್ ಕಾನೂನಿನ ಪ್ರಕಾರ ವಿವಾಹ ಅನೂರ್ಜಿತವಾಗಿದೆ ಎಂದು ಹೇಳಿದ್ದು, ಹುಡುಗಿ ಮದುವೆಯ ಸೂಕ್ತ ವಯಸ್ಸು ತಲುಪಿದಾಗ, ಆಕೆಯ ವಿವಾಹವನ್ನು ಒಪ್ಪಿಕೊಳ್ಳುವುದು ಮತ್ತು ಅದನ್ನು ರದ್ದು ಮಾಡುವ ಮುಕ್ತ ಅವಕಾಶ ಆಕೆಗೆ ಇರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.