Alvas Journalism Workshop | ಆಳ್ವಾಸ್ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಾಗಾರ
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತನ್ನ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ಹಮ್ಮಿಕೊಂಡಿತ್ತು.
ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತುಮಕೂರು ವಿವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪದ್ಮನಾಭ ಕೆ.ವಿ ಭಾಗವಹಿಸಿದ್ದು, ಅವರು "ಅಭಿವೃದ್ಧಿಯಲ್ಲಿ ಸಂವಹನದ ಪಾತ್ರ" ವಿಷಯದ ಕುರಿತು ವಿಚಾರ ಮಂಡನೆ ಮಾಡಿದರು.
ಅಭಿವೃದ್ದಿ ಎಂದರೆ ಕೇವಲ ತಾವು ಆರ್ಥಿಕವಾಗಿ ಬಲಶಾಲಿ ಆಗುವುದಲ್ಲ, ಬದಲಿಗೆ ಪ್ರಗತಿಯ ಪಥದಲ್ಲಿ ಎಲ್ಲ ಜನಸಮುದಾಯವನ್ನು ಒಟ್ಟಿಗೆ ಕೊಂಡೊಯ್ಯುವುದು ಎಂದು ಹೇಳಿದರು. ಹೇಗೆ ಪರಿಹಾರ ಇಲ್ಲದ ಸಮಸ್ಯೆಯಿಲ್ಲವೋ ಹಾಗೆಯೇ, ಸರ್ವರ ಪ್ರಗತಿ ಇಲ್ಲದ ದೇಶದಲ್ಲಿ ಏಳಿಗೆಯಿಲ್ಲ ಎಂದರು.
ಸಸ್ಯ ಸಂಧಾನ, ಅಕ್ಷರ ವಿಮೋಚನೆ, ತಂಬಾಕು ಮಹಾತ್ಮೆ, ಇಳಯಣ್ಣನ ಕಥೆ, ವಿದ್ಯಾ ವಿಜಯ, ಮಿತ ಸಂತಾನದ ಮಹಿಮೆ, ನಿಸರ್ಗ ಸಂಧಾನ- ಮೋಹಿನಿ ಚರಿತ್ರೆ ಮುಂತಾದ ವೈಚಾರಿಕ, ಜನಪರ ಪ್ರಸಂಗಗಳ ಮೂಲಕ ಜನರನ್ನು ವಿವಿಧ ಸಂದರ್ಭಗಳ ಜ್ವಲಂತ ಸಮಸ್ಯೆಗಳ ನೆಲೆಯಲ್ಲಿ ಜನರನ್ನು ಜಾಗೃತಿಗೊಳಿಸಿದ ರೀತಿಯನ್ನು ಪದ್ಮನಾಭ ವಿವರಿಸಿದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕಿ ಡಾ ಸಫಿಯಾ ನಯೀಮ್, ರವಿ ಮೂಡುಕೊಣಾಜೆ, ನಿಶಾನ್ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.