-->
CID enquiry on CCB Police | ಅಕ್ರಮ ವಾಹನ ಮಾರಾಟ ಪ್ರಕರಣ: ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಐಡಿ ತನಿಖೆ ಚುರುಕು

CID enquiry on CCB Police | ಅಕ್ರಮ ವಾಹನ ಮಾರಾಟ ಪ್ರಕರಣ: ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಐಡಿ ತನಿಖೆ ಚುರುಕು



ಅಕ್ರಮ ವಾಹನ ಮಾರಾಟದ ಅಪರಾಧದ ಆರೋಪ ಹೊತ್ತು ವರ್ಗಾವಣೆಗೊಂಡು ಸಿಸಿಬಿ ಪೊಲೀಸರ ವಿರುದ್ಧ ಸಿಐಡಿ ತನಿಖೆ ಆರಂಭಗೊಂಡಿದೆ.


ಮಂಗಳೂರಿನ ಅಪರಾಧ ಪ್ರಕರಣ ಒಂದರಲ್ಲಿ ವಶಪಡಿಸಿಕೊಳ್ಳಲಾದ ಕಾರನ್ನು ಹಿಂದಿನ ಸಿಸಿಬಿ ಪೊಲೀಸರು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎನ್ನಲಾಗಿದ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಮಂಗಳೂರಿಗೆ ಆಗಮಿಸಿರುವ ಸಿಐಡಿ ತಂಡ ಪ್ರಕರಣದ ತನಿಖೆ ನಡೆಸಿದೆ ಸಿಐಡಿ ಎಸ್ಪಿ ರೋಹಿಣಿ ಕಟೋಚ್ ನೇತೃತ್ವದ ತಂಡ ವಿವಿಧ ಕಡೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.


ಪ್ರಕರಣದ ಸಮಗ್ರ ವರದಿ ಸಿಐಡಿ ಡಿ ಜಿ ಅವರಿಗೆ ಸಲ್ಲಿಕೆಯಾಗಲಿದೆ. ನಂತರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೂ ಈ ವರದಿ ಸಲ್ಲಿಸಲಾಗುವುದು.


ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಪ್ರಾಥಮಿಕ ಹಂತದ ತನಿಖೆಯನ್ನು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾವ್ಕರ್ ನಡೆಸಿದ್ದಾರೆ. ಈ ತನಿಖಾ ವರದಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿದೆ.


ಪ್ರಾಥಮಿಕ ತನಿಖೆಯಲ್ಲಿ ಈಗಾಗಲೇ ನಾಲ್ವರು ಪೊಲೀಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಸಿಸಿಬಿ ನಿಕಟಪೂರ್ವ ಎಸ್ಐ ಕಬ್ಬಾಳ್ ರಾಜ್, ಸಿಸಿಬಿ ಆಶಿತ ರಾಜ ಹಾಗೂ ನಾರ್ಕೋಟಿಕ್ ಎಕನಾಮಿಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಅಪರಾಧ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ ಇದರ ಜೊತೆ ಬ್ರೋಕರ್ ದಿವ್ಯದರ್ಶನ ಹೆಸರನ್ನು ಉಲ್ಲೇಖ ಮಾಡಲಾಗಿದೆ. ಹಣ ದ್ವಿಗುಣಗೊಳಿಸಿ ವ್ಯವಹಾರ ನಡೆಸುತ್ತಿದ್ದ ಎಲಿಯಾ ಸಂಸ್ಥೆ ನಡೆಸಿದ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.

Ads on article

Advertise in articles 1

advertising articles 2

Advertise under the article