-->
2 children adopted educationally by Ravindra Shetty | ಅಲೆಮಾರಿ ಮಕ್ಕಳ ದತ್ತು: ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು

2 children adopted educationally by Ravindra Shetty | ಅಲೆಮಾರಿ ಮಕ್ಕಳ ದತ್ತು: ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು




ಇತ್ತೀಚೆಗೆ ದೃಶ್ಯ ಮಾಧ್ಯಮವೊಂದು ತುಮಕೂರು ನಡವಳಲು ತೊಂಡಗೆರೆಯ ಗುಡಿಸಲು ನಿವಾಸಿ ನರಸಿಂಹ ಮೂರ್ತಿ ಮತ್ತು ಕುಟುಬದ ನರಕಯಾತನೆ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು.


ಈ ಮನ ಮಿಡಿಯುವ ಸುದ್ದಿಗೆ ಸ್ಪಂದಿಸಿದ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಈ ಕುಟುಂಬದ ಇಬ್ಬರು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡಿದ್ದಾರೆ.


ರಾಜ್ಯದ ಪ್ರತಿಷ್ಠಿತ ಸುದ್ದಿ ವಾಹಿನಿಗಳಲ್ಲಿ ಒಂದಾದ ಸುವರ್ಣ ನ್ಯೂಸ್ ನಲ್ಲಿ ತುಮಕೂರು ನಡವಳಲು ತೊಂಡಗೆರೆ ಯ ಗುಡಿಸಲು ವಾಸ ಎನ್ನಲು ಸಾಧ್ಯವಿಲ್ಲದ ನಿವಾಸ ರಹಿತ ನರಸಿಂಹ ಮೂರ್ತಿ ಯವರ ಪತ್ನಿ ಮಕ್ಕಳ ನರಕಯಾತನೆಯ ಬದುಕಿನ ವಿಸ್ತ್ರತ ವರದಿಯನ್ನು ಪ್ರಸಾರ ಮಾಡಿತ್ತು.


ಈ ಸುದ್ದಿಯನ್ನು ಗಮನಿಸಿದ ರವೀಂದ್ರ ಶೆಟ್ಟಿ ಅವರು, ಸರಕಾರ ಈಗಾಗಲೇ ನಿವೇಶನ ನೀಡುವಲ್ಲಿ ಮುಂದೆ ಬಂದಿದೆ, ಈ ಬಗ್ಗೆ ನಾನು ಸಾಕಷ್ಟು ಪ್ರಯತ್ನ ಪಡುತ್ತೇನೆ. ಜೊತೆಗೆ ಈ ಮನಕರಗುವ ಸುದ್ದಿಯನ್ನು ಗಮನಿಸಿ ಈ ಬಡ ಕುಟುಂಬದ ಇಬ್ಬರು ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸುತ್ತೇನೆ ಎಂದು ಹೇಳಿದ್ದರು.







ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆ ಬಡ ಕುಟುಂಬದವರು ವಾಸವಿರುವ ಜಾಗಕ್ಕೆ ಹೋಗಿ ಸಹಾಯ ಹಸ್ತ ನೀಡಿದರು. ಅಲ್ಲದೆ, ನಿಮ್ಮ ಜೊತೆ ನಾನಿದ್ದೇನೆ ಎಂದು ಭರವಸೆ ನೀಡಿದ್ದಲ್ಲದೆ, ಕುಟುಂಬದ ಇಬ್ಬರು ಮಕ್ಕಳ ಶೈಕ್ಷಣಿಕ ಜವಾಬ್ದಾರಿಯನ್ನೂ ರವೀಂದ್ರ ಶೆಟ್ಟಿಯವರು ತೆಗೆದುಕೊಂಡಿದ್ಧಾರೆ.

Ads on article

Advertise in articles 1

advertising articles 2

Advertise under the article