Farmers getting ready for mammoth protest | ರೈತರಿಗೆ ಕಂಪೆನಿಗಳ ಉಂಡೆನಾಮ!: ಕುಕ್ಕುಟ ಪಾಲನೆ ಸಂತ್ರಸ್ತರಿಂದ ಆಹೋರಾತ್ರಿ ಹೋರಾಟಕ್ಕೆ ಸಿದ್ಧತೆ
ರೈತರ ಜೀವನಾಡಿಯಾದ ಕುಕ್ಕುಟ ಪಾಲನೆ ಅಪಾಯದಲ್ಲಿದೆ. ಬೃಹತ್ ಕಂಪೆನಿಗಳು ರಾಜ್ಯದ ರೈತರಿಗೆ ನೀಡಬೇಕಾದ ಆದಾಯದ ಪಾಲನ್ನು ನೀಡದೆ ಸತಾಯಿಸುತ್ತಿದೆ. ಮಾತ್ರವಲ್ಲ, ಒಪ್ಪಿಕೊಂಡ ಹಣವನ್ನೂ ನೀಡದೆ ರೈತರನ್ನು ಸಂಕಷ್ಟದ ಸುಳಿಗೆ ಸಿಲುಕಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ನಂಜುಂಡಪ್ಪ ಆರೋಪಿಸಿದ್ದಾರೆ.
ಈ ಅನ್ಯಾಯದ ವಿರುದ್ಧ ಹಾಗೂ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಹೋರಾತ್ರಿ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ. ಈ ಹಿನ್ನೆಲೆಯ್ಲಿ ಸಭೆ ಸೇರಿದ್ದ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಅಭಿವೃದ್ಧಿ ಸಂಘ ಹೋರಾಟದ ರೂಪರೇಶೆಯನ್ನು ಸಿದ್ಧಪಡಿಸಿದೆ.
ಈ ಬಗ್ಗೆ ಸಂಘದ ಅಧ್ಯಕ್ಷರಾದ ನಂಜುಂಡಪ್ಪ ರೈತರಿಗೆ ಹೊರಡಿಸಿದ ಮನವಿ ಪತ್ರ ಇಲ್ಲಿದೆ.
"ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರಿಗೆ ತಿಳಿಸುವುದೇನೆಂದರೆ ಕಂಪನಿಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ಫಲವಾಗಿ ಹನ್ನೊಂದನೇ ತಾರೀಕು ಜನವರಿಯಲ್ಲಿ ನಡೆದಂತಹ ಸಭೆಯಲ್ಲಿ ಏಳುವರೆ ರೂಗಳು ಕೊಡಲು ಸರ್ಕಾರದ ಮಧ್ಯಸ್ತಿಕೆಯಲ್ಲಿ ಕಂಪನಿಗಳು ಒಪ್ಪಿಕೊಂಡು ಹೋಗಿತ್ತು. ಅದಕ್ಕೆ ತಕ್ಕಂತೆ ಕಂಪನಿಗಳು ನಮ್ಮ ಒಂದುವರೆ ತಿಂಗಳಾದರೂ ರೈತರಿಗೆ ಹಣವನ್ನು ನೀಡಿರುವುದಿಲ್ಲ.
ಇದರ ಬಗ್ಗೆ ಪಶುಪಾಲನಾ ಇಲಾಖೆಯ ನಿರ್ದೇಶಕರಾದ ಮತ್ತು ಕೋಳಿ ಸಾಕಾಣಿಕೆ ರೈತರ ಕುಂದುಕೊರತೆಗಳ ಸಮಿತಿ ಅಧ್ಯಕ್ಷರಾದ ಶಿವರಾಮ ರವರನ್ನು ವಿಚಾರಿಸಿದಾಗ ಇದಕ್ಕೆ ಸಂಬಂಧಪಟ್ಟಂತೆ ನಾವು ಕಂಪನಿಗಳಿಗೆ ನೋಟೀಸನ್ನು ಜಾರಿ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ ಅದಕ್ಕಾಗಿ ಸ್ನೇಹಿತರೆ ನಮಗೆ ಸರಕಾರದ ಮಟ್ಟದಲ್ಲಿ ನ್ಯಾಯವನ್ನು ಸಿಗುವವರೆಗೂ ನಮ್ಮ ರೈತ ಮುಖಂಡರು ಗಳೆಲ್ಲ ಸೇರಿ ಮುಷ್ಕರವನ್ನು ಆರಂಭಿಸಿದ್ದೇವೆ.
ದಯವಿಟ್ಟು ಎಲ್ಲಾ ಕೋಳಿ ಸಾಕಾಣಿಕೆ ರೈತರು ಮುಂದೆ ಹೋರಾಟದಲ್ಲಿ ಪಾಲ್ಗೊಂಡ ನಮಗೆ ನ್ಯಾಯವನ್ನು ಸಿಗುವವರೆಗೂ ಪಾಲ್ಗೊಳ್ಳಬೇಕೆಂದು ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ನಂಜುಂಡಪ್ಪನವರು ಮತ್ತು ಪದಾಧಿಕಾರಿಗಳು ತಿಳಿಯ ಬಯಸುತ್ತೇವೆ.
ದಿಂಬು ಚಾಪೆಗಳ ಸಮೇತ ಬರಬೇಕೆಂದು ತಿಳಿಸುತ್ತಿದ್ದೇವೆ. ನಮ್ಮ ಹೋರಾಟ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸೋಣ ಅಂತ ತಮ್ಮಲ್ಲಿ ಪ್ರಾರ್ಥಿಸುತ್ತೇನೆ"
ಇತೀ, ಸಹಿ (ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ನಂಜುಂಡಪ್ಪ)