-->
Granny murder twist-25 year girl arrested | ವೃದ್ಧೆ ಅಸಹಜ ಸಾವು ಭೇದಿಸಿದ ಪೊಲೀಸರಿಗೆ ಶಾಕ್: ಆರೋಪಿ ಯುವತಿ ಪೊಲೀಸ್ ಬಲೆಗೆ

Granny murder twist-25 year girl arrested | ವೃದ್ಧೆ ಅಸಹಜ ಸಾವು ಭೇದಿಸಿದ ಪೊಲೀಸರಿಗೆ ಶಾಕ್: ಆರೋಪಿ ಯುವತಿ ಪೊಲೀಸ್ ಬಲೆಗೆ




ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಅಮ್ಮುಂಜೆ ಗ್ರಾಮದ ವೃದ್ಧೆಯ ಅಸಹಜ ಸಾವು ಬೆಚ್ಚಿ ಬೀಳಿಸುವ ರೀತಿಯ ತಿರುವು ಪಡೆದುಕೊಂಡಿದೆ. ಅಸಹಜ ಸಾವು ಈಗ ಕೊಲೆ ಪ್ರಕರಣವಾಗಿ ಬದಲಾಗಿದ್ದು, ಆಪ್ತರೇ ಈ ಕೊಲೆ ಮಾಡಿರುವುದು ಪೊಲೀಸರಿಗೆ ಶಾಕ್ ಆಗುವಂತೆ ಮಾಡಿದೆ.


ಬಂಟ್ವಾಳ ಪೊಲೀಸರು ಈ ಅಸಹಜ ಸಾವಿನ ತನಿಖೆಯನ್ನು ಗಂಭೀರವಾಗಿ ನಡೆಸಿದಾಗ ಈ ಮಹತ್ವದ ಮಾಹಿತಿ ಹೊರಬಿದ್ದಿದೆ.


ಇವರ ಕೊಲೆ ಮಾಡಿರುವುದು ವೃದ್ಧೆಯನ್ನು ನೋಡಿಕೊಂಡು ಆರೈಕೆ ಮಾಡಲು ಬರುತ್ತಿದ್ದ ಅಮ್ಟಾಡಿ ನಿವಾಸಿ ಎಲ್ಮಾ ಪ್ರಶ್ಚಿತಾ ಬರೆಟ್ಟೊ ಎಂಬ 25ರ ಹರೆಯದ ಯುವತಿ. 


ಈಕೆಯ ಕೃತ್ಯಕ್ಕೆ ಸಾಥ್ ನೀಡಿದ್ದು ಸತೀಶ್ ಮತ್ತು ಚರಣ್ ಎಂಬ ಯುವಕರು. ಈ ಕೊಲೆಯ ರಹಸ್ಯವನ್ನು ಭೇದಿಸಿದ ಪೊಲೀಸರು ಈ ಮೂವರನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ಧಾರೆ.


ಜನವರಿ 26ರಂದು ಬಂಟ್ವಾಳದ ಅಮ್ಮುಂಜೆ ಗ್ರಾಮದಲ್ಲಿ ಬೆನೆಡಿಕ್ಟ್ ಕಾರ್ಲೊ ಎಂಬ 72 ವರ್ಷ ವೃದ್ಧೆಯ ಅಸಹಜ ಸಾವು ಪ್ರಕರಣ ವರದಿಯಾಗಿತ್ತು.

ಫೆಬ್ರವರಿ 2ರಂದು ಮೃತ ಮಹಿಳೆಯ ಪುತ್ರ ಠಾಣೆಗೆ ಆಗಮಿಸಿ ತಮ್ಮ ತಾಯಿಯ ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರು ನೀಡಿದ್ದರು. ಇದನ್ನು ಸವಾಲಾಗಿ ತೆಗೆದುಕೊಂಡ ಪೊಲೀಸರು ಅನುಮಾನವಿದ್ದವರನ್ನು ವಿಚಾರಣೆ ಮಾಡಿದ್ದರು.


ಈ ಸಂದರ್ಭದಲ್ಲಿ ಕೆಲಸದಾಕೆಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಯುವತಿ ಎಲ್ಮಾ ಪ್ರಶ್ಚಿತ ಬೆರೆಟ್ಟೊ ವೃದ್ಧೆ ಬಳಿ ಇದ್ದ ಚಿನ್ನಾಭರಣ ದೋಚಲು ಸ್ಕೆಚ್ ಹಾಕಿದ್ದಳು. 


ಈಕೆ ತನ್ನ ಸ್ನೇಹಿತರಾದ ನರಿಕೊಂಬು ನಿವಾಸಿ ಸತೀಶ್ ಮತ್ತು ಚರಣ್ ಜೊತೆ ಸೇರಿಕೊಂಡು ಜನವರಿ 25ರಂದು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಪೊಲೀಸ್ ವಿಚಾರಣೆಯಲ್ಲಿ ಆಕೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಆಕೆ ನೀಡಿದ ಮಾಹಿತಿ ಆಧಾರದಲ್ಲಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ.

Ads on article

Advertise in articles 1

advertising articles 2

Advertise under the article