Petrol price registered 3 figure mark | ಮೂರಂಕೆ ದಾಟಿದ ಪೆಟ್ರೋಲ್ ಬೆಲೆ: ಗಗನಮುಖಿ ತೈಲಧಾರಣೆ, ಪೆಟ್ರೋಲ್ ಪಂಪ್‌ಗಳು ಬಂದ್
ಪೆಟ್ರೋಲ್ ಗ್ರಾಫ್ ಏರಿಕೆ ಜನಸಾಮಾನ್ಯರನ್ನು ದಂಗುಬಡಿಸಿದೆ. ಕೊರೋನಾ ಆರ್ಥಿಕ ಹಿಂಜರಿತದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನತೆಗೆ ಮರ್ಮಾಘಾತ ನೀಡುವಂತೆ ಪೆಟ್ರೋಲ್ ಬೆಲೆ ಏರತೊಡಗಿದೆ.
ಭಾರತದ ಕೆಲವು ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂ. ದಾಟಿ ಮುನ್ನುಗ್ಗುತ್ತಿದೆ. ಇದರಿಂದ ಹಳೆ ಅನಲಾಗ್ ಯಂತ್ರ ಅಳವಡಿಸಿದ ಪೆಟ್ರೋಲ್ ಪಂಪ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಭೋಪಾಲ್‌ನಲ್ಲಿ ಕೆಲವೊಂದು ಪೆಟ್ರೋಲ್ ಪಂಪ್‌ಗಳಲ್ಲಿ ಈ ತಾಂತ್ರಿಕ ತೊಂದರೆ ಕಂಡುಬಂದಿದೆ ಎಂದು ವರದಿಯಾಗಿದೆ.
ಈ ಹಿನ್ನೆಲೆಯಲ್ಲಿ ದೇಶದ ಇತರ ಭಾಗಗಳಲ್ಲಿ ತೈಲ ಧಾರಣೆ ತೋರಿಸುವ ಯಂತ್ರಗಳನ್ನು ಬದಲಾಯಿಸಲು ಮಾಲಕರು ಬೇಡಿಕೆ ಇಟ್ಟಿದ್ದಾರೆ.
ಇದೇ ವೇಳೆ, ಏರುತ್ತಿರುವ ತೈಲ ಬೆಲೆಯಿಂದಾಗಿ ಎಲ್‌ಪಿಜಿ ದರದಲ್ಲೂ ಭಾರೀ ಏರಿಕೆ ಕಂಡುಬಂದಿದೆ. ರಾಜಧಾನಿ ದೆಹಲಿಯಲ್ಲಿ ಸೋಮವಾರದಿಂದ ಒಂದು ಸಿಲಿಂಡರ್ ಗ್ಯಾಸ್ ದರದಲ್ಲಿ 50 ರೂ. ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ಒಂದು ಸಿಲಿಂಡರ್ ಎಲ್‌ಪಿಜಿ ಬೆಲೆ ರೂ. 769ಕ್ಕೇರಿದೆ.
ಏರುತ್ತಿರುವ ಧಾರಣೆಯಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ.