-->
Police Family in Pilikula | ಪಿಲಿಕುಳದಲ್ಲಿ ಖಾಕಿ ಕಲರವ: ಕುಟುಂಬದ ಜೊತೆ ಪೊಲೀಸರು ಫುಲ್ ಖುಷ್

Police Family in Pilikula | ಪಿಲಿಕುಳದಲ್ಲಿ ಖಾಕಿ ಕಲರವ: ಕುಟುಂಬದ ಜೊತೆ ಪೊಲೀಸರು ಫುಲ್ ಖುಷ್





ಪೊಲೀಸರೂ ಬಿಡುವಿಲ್ಲದ ಕರ್ತವ್ಯದಲ್ಲಿ ಸುಸ್ತಾಗಿರುತ್ತಾರೆ. ಅವರಿಗೂ ಬಿಡುವು ಬೇಕು. ಜೀವನದಲ್ಲಿ ನವೋತ್ಸಾಹ ಚಿಮ್ಮಬೇಕಿದ್ದರೆ ಒಂದಷ್ಟು ಕಾಲ ಖುಷಿಯಿಂದ ಕಳೆಯಬೇಕು.

ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿರುವ ಉತ್ಸಾಹಿ ಐಪಿಎಸ್ ಅಧಿಕಾರಿ ಶಶಿಕುಮಾರ್, ತಮ್ಮ ಸಹೋದ್ಯೋಗಿ ಪೊಲೀಸರಿಗೆ ಹೊಸ ಉತ್ಸಾಹ ಮೂಡಿಸುವ, ಆತ್ಮವಿಶ್ವಾಸ ತುಂಬುವ ಕಾರ್ಯಕ್ರಮ ನಡೆಸಿದ್ದಾರೆ.



ಮಂಗಳೂರಿನ ಪೊಲೀಸರು ಪಿಲಿಕುಳ ನಿಸರ್ಗಧಾಮದಲ್ಲಿ ಒಂದು ದಿನ ತಮ್ಮ ಕರ್ತವ್ಯದ ಮಧ್ಯೆ ಹರ್ಷೋಲ್ಲಾಸದಿಂದ ಕಳೆದರು.



ಮಂಗಳೂರಿನ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಎಎಸ್‌ಐ ಸಮ್ಮೇಳನ-2021 ಯಶಸ್ವಿಯಾಗಿ ನಡೆಯಿತು. ಮಂಗಳೂರು ನಗರ ಕಮಿಷನರೇಟ್‌ನ 106 ಮಂದಿ ಎಎಸ್‌ಐ ಅಧಿಕಾರಿಗಳು, ಎಆರ್‌ಎಸ್‌ಐ ಮಟ್ಟದ 25 ಅಧಿಕಾರಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡರು. ಆ ಬಳಿಕ ಪೊಲೀಸರು, ಅವರ ಕುಟುಂಬದ ಸದಸ್ಯರು ಸೇರಿ ಒಟ್ಟು 257 ಮಂದಿ ಒಂದು ದಿನ ಜೈವಿಕ ಉದ್ಯಾನವನದಲ್ಲಿ ಕಳೆದರು.



ಸಮ್ಮೇಳನದಲ್ಲಿ ಭಾಗವಹಿಸಿದ ಅಧಿಕಾರಿಗಳು ತಮ್ಮ ವೃತ್ತಿಜೀವನದ ಅಪಾರ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಭಾಗವಾಗಿ ಆರೋಗ್ಯ ತಪಾಸಣೆ ಹಾಗೂ ಇತರ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿತ್ತು.












ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶರಣಪ್ಪ ಅವರೂ ತಮ್ಮ ಸಹೋದ್ಯೋಗಿಗಳ ಮನೋಚೈತನ್ಯ ತುಂಬುವ ವಿವಿಧ ಕಸರತ್ತುಗಳನ್ನು ನಡೆಸಿದ್ದರು. ಈಜು, ಸೈಕ್ಲಿಂಗ್, ವ್ಯಾಯಾಮ, ಝುಂಬಾ ಡ್ಯಾನ್ಸ್ ಹೀಗೆ ಭಾನುವಾರದ ಸರಣಿ ಕಾರ್ಯಕ್ರಮಗಳು ಪೊಲೀಸರಲ್ಲಿ ಹೊಸ ಚೈತನ್ಯ ತುಂಬುತ್ತಿತ್ತು.



ಇದೀಗ ಶಶಿಕುಮಾರ್ ಅವರೂ ತಮ್ಮ ಸಹೋದ್ಯೋಗಿ ಮಿತ್ರರಿಗೆ ಚೈತನ್ಯ ತುಂಬುತ್ತಿರುವುದು ಆಶಾದಾಯಕ ಬೆಳವಣಿಗೆಯೇ ಸರಿ...

Ads on article

Advertise in articles 1

advertising articles 2

Advertise under the article