Time Keeping row-case against 2 bus drivers | ಟೈಂ ಕೀಪಿಂಗ್ ಗಲಾಟೆ- ಖಾಸಗಿ ಬಸ್ ಸಿಬ್ಬಂದಿ ಹೊಡೆದಾಟ: ಎರಡೂ ಬಸ್ ವಶಕ್ಕೆ ಪಡೆದ ಪೊಲೀಸರು
- ಸಾರ್ವಜನಿಕರಿಗೆ ಪುಕ್ಕಟೆ ಮನೋರಂಜನೆ
- ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್
- ಎರಡೂ ಬಸ್ ವಶಕ್ಕೆ ಪಡೆದ ಪಡುಬಿದ್ರಿ ಪೊಲೀಸರು
- ಬಸ್ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಮಂಗಳೂರು ಉಡುಪಿ ಮಧ್ಯೆ ಓಡಾಡುವ ಖಾಸಗಿ ಎಕ್ಸ್ಪ್ರೆಸ್ ಬಸ್ಸುಗಳ ಸಿಬ್ಬಂದಿಯ ಅಸಭ್ಯ ವರ್ತನೆ ಕರಾವಳಿ ಜನರಿಗೆ ಹೊಸತೇನಲ್ಲ. ಇದೀಗ ಸಿಬ್ಬಂದಿ ಸಮಯಪಾಲನೆ ವಿಚಾರಕ್ಕೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.
ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಸಾರ್ವಜನಿಕರಿಗೆ ಪುಕ್ಕಟೆ ಮನೋರಂಜನೆ ಸಿಕ್ಕಿದೆ. ಜೊತೆಗೆ ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಬಸ್ ಚಾಲಕರು ಪೊಲೀಸ್ ಕೇಸನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.
ಘಟನೆಯ ವಿವರ
ಮಂಗಳೂರಿನಿಂದ ಉಡುಪಿಗೆ ಹೊರಟ ಈ ಎರಡೂ ಬಸ್ಸುಗಳು ಪಡುಬಿದ್ರೆ ಇಂದ ಬರುವಾಗ ಸಮಯದಲ್ಲಿ ಸ್ವಲ್ಪ ಏರುಪೇರಾಗಿ ನವದುರ್ಗ ಬಸ್ಸು ಮುಂದೆ ಬಂದಿತ್ತು. ಇದಕ್ಕಾಗಿ ಮಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ವಿಶಾಲ್ ಎಂಬ ಬಸ್ಸಿನ ಚಾಲಕರು ಮತ್ತು ನವದುರ್ಗ ಎಂಬ ಬಸ್ಸಿನ ಚಾಲಕರು ಪರಸ್ಪರ ಮಾಡಿಕೊಂಡಿದ್ದಾರೆ.
ಹಿಂದಿನಿಂದ ಬಂದ ವಿಶಾಲ್ ಬಸ್ಸಿನ ಚಾಲಕ ಸಿದ್ಧಿಕ್ ಎಂಬಾತ ಕೆಳಗಿಳಿದು ನವದುರ್ಗ ಬಸ್ಸಿನ ಚಾಲಕ ಇಕ್ಬಾಲ್ ಎಂಬವರಿಗೆ ಥಳಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಬಸ್ಸುಗಳ ಹಿಂದೆ ಇದ್ದ ಕಾಪು ಪೊಲೀಸ್ ಅಧಿಕಾರಿ ರಾಘವೇಂದ್ರ ತಮ್ಮ ಜೀಪಿನಲ್ಲಿ ಕರ್ತವ್ಯದ ಹಿನ್ನೆಲೆಯಲ್ಲಿ ಪ್ರಯಾಣಿಸುತ್ತಿದ್ದರು. ಘಟನೆಯನ್ನು ಕಣ್ಣಾರೆ ಕಂಡ ಅವರು ತಕ್ಷಣ ಪಡುಬಿದ್ರಿಯ ಪೊಲೀಸ್ ಅಧಿಕಾರಿ ದಿಲೀಪ್ ಅವರಿಗೆ ಮಾಹಿತಿ ನೀಡಿದ್ದಾರೆ.
ಪಡುಬಿದ್ರಿ ಠಾಣೆಯ ಪೊಲೀಸ್ ಅಧಿಕಾರಿ ದಿಲೀಪ್ ತಮ್ಮ ಸಿಬ್ಬಂದಿ ಜೊತೆ ಸ್ಥಳಕ್ಕೆ ಆಗಮಿಸಿ ಎರಡು ಬಸ್ಸುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಮತ್ತು ಎರಡು ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಉಡುಪಿಯ ಕಾಪು ಬಳಿ ಮಾರಿ ಗುಡಿಯ ಹತ್ತಿರ ಕಬ್ಬಿಣದ ಸಲಾಕೆ ಹಿಡಿದು ಬಸ್ಸಿನ ಸಿಬ್ಬಂದಿ ಪರಸ್ಪರ ಹೊಡೆದಾಡಿ ಕೊಂಡಿದ್ದಾರೆ ಇದೀಗ ಇನ್ನೊಂದು ಇಂಥದ್ದೇ ಘಟನೆ ಮರುಕಳಿಸಿದ್ದು ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ಜೊತೆಗೆ ಸಿಬ್ಬಂದಿ ಪೋಲಿಸ್ ಕೇಸನ್ನು ಮೈಮೇಲೆ ಎಳೆದುಕೊಂಡಿದ್ದಾರೆ.