Rape case lodged against tekkie | ಪ್ರೀತಿಯ ನಾಟಕವಾಡಿ ಕಾಲೇಜ್ ವಿದ್ಯಾರ್ಥಿನಿ ಜೊತೆ ಸೆಕ್ಸ್: ಪ್ರಾಧ್ಯಾಪಕಿ ಪುತ್ರನ ಬಂಧನ
ಪ್ರೀತಿಸುವ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಕಾಲೇಜು ವಿದ್ಯಾರ್ಥಿನಿ ಜೊತೆ ಸೆಕ್ಸ್ ನಡೆಸಿ ಬಳಿಕ ಮೋಸ ಮಾಡಿದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿ ಕಲಿಯುತ್ತಿರುವ ಕಾಲೇಜಿನ ಪ್ರಾಧ್ಯಾಪಕಿಯೊಬ್ಬರ ಪುತ್ರ ಚಂದನ್ ಎಂಬಾತ ಈ ಕೃತ್ಯ ಎಸಗಿ ಈಗ ಜೈಲಿನ ಕಂಬಿ ಎಣಿಸುತ್ತಿದ್ದಾನೆ.
ತಾನು ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಉಪನ್ಯಾಸಕಿಯ ಪುತ್ರನಾಗಿರುವ ಚಂದನ್ ತನ್ನನ್ನು ಪ್ರೀತಿಸಿ ಬಾಳ ಸಂಗಾತಿ ಮಾಡುತ್ತೇನೆ ಎಂದು ನಂಬಿಸಿ ಹಲವು ಬಾರಿ ನನ್ನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಮತ್ತು ತನ್ನ ಮಾತನ್ನು ಈಡೇರಿಸದೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾನೆ ಎಂದು ಸಂತ್ರಸ್ತೆ ಬೆಂಗಳೂರಿನ ವಿದ್ಯಾರಣ್ಯ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಚಂದನ್‌ನ್ನು ಬಂಧಿಸಿದ್ದು, ತನಿಖೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಂತ್ರಸ್ತೆ ಮತ್ತು ಚಂದನ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದಾಗ ಚಂದನ್ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದ ಎನ್ನಲಾಗಿದೆ.
ಅಲ್ಲದೆ, ಮದುವೆಯಾಗುವುದಾಗಿ ಸಂತ್ರಸ್ತೆಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡು ಕೊನೆಗೆ ಮದುವೆಯಾಗುವುದಿಲ್ಲ ಎಂದು ಹೇಳಿದ್ದ.
ಇದರಿಂದ ಮನನೊಂದ ಯುವತಿ ಹತಾಶೆಯಿಂದ ಪೊಲೀಸ್ ಠಾಣೆ ಮಟ್ಟಿಲೇರಿದ್ದರು. ನಗರದ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕಿಯೊಬ್ಬರ ಪುತ್ರ ಚಂದನ್ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದ.