-->
Corrupt Surveyor Arrested in Mangaluru |  30 ಸಾವಿರ ಲಂಚಕ್ಕೆ ಬೇಡಿಕೆ: ಮಂಗಳೂರಿನ ಭ್ರಷ್ಟ ಸರ್ವೇಯರ್ ಗಂಗಾಧರ ಅರೆಸ್ಟ್!

Corrupt Surveyor Arrested in Mangaluru | 30 ಸಾವಿರ ಲಂಚಕ್ಕೆ ಬೇಡಿಕೆ: ಮಂಗಳೂರಿನ ಭ್ರಷ್ಟ ಸರ್ವೇಯರ್ ಗಂಗಾಧರ ಅರೆಸ್ಟ್!




ಮಂಗಳೂರು ಎಸಿಬಿ ಯಶಸ್ವೀ ಕಾರ್ಯಾಚರಣೆ

ಉದ್ಯಮಿಯಿಂದ ಲಂಚ ಪಡೆದಾಗ ಸರ್ವೇಯರ್ ಬಂಧನ


ಬಹಳ ಸಮಯದಿಂದ ಮಂಗಳೂರಿನ ಜನರನ್ನು ಲಂಚದ ಹಣಕ್ಕಾಗಿ ಪೀಡಿಸುತ್ತಿದ್ದ ಮಂಗಳೂರು ನಗರ ಸರ್ವೇಯರ ( ಮಂಗಳೂರು ತಾಲೂಕಿನ ಪ್ರಭಾರ) ಗಂಗಾಧರ M ಇಂದು ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ- ACB ಯ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.


ಮಂಗಳೂರಿನ ನಗರದಲ್ಲಿ ನಾಗರೀಕರೋರ್ವರು ತಮ್ಮ ಕಛೇರಿಯ ಪೀಠೋಪಕರಣ ಮಾಡಿಸಲು ತಮ್ಮ ಮನೆಯ ಆವರಣದಲ್ಲಿ ಇದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆಗೆ single purmit ಅನುಮತಿಗಾಗಿ ಕೋರಿಕೆ ಪತ್ರ ಸಲ್ಲಿಸಿದ್ದರು, ಮಂಗಳೂರು ನಗರದ ಅರಣ್ಯ ಇಲಾಖೆ ಈ ಪತ್ರವನ್ನು ಕಂದಾಯ ಇಲಾಖೆಗೆ ಕಳಿಸಿತ್ತು.



ಆದರೆ, ಬರೋಬ್ಬರಿ ಒಂದು ತಿಂಗಳು ಕಳೆದರೂ ಸರ್ವೇಯರ್ ಗಂಗಾಧರ್ ಸ್ಥಳ ಪರಿಶೀಲನೆಗೆ ಬರಲೇ ಇಲ್ಲ. ಮತ್ತೆ ಸಂಪರ್ಕಿಸಿದಾಗ, ಅವರು ಈ ಕಾರ್ಯಕ್ಕೆ ಕನಿಷ್ಟ 3000 ರೂ. ಲಂಚ ನೀಡಬೇಕೆಂಬ ಬೇಡಿಕೆ ಇಟ್ಟರು.


ಈ ಪರ್ಮಿಟ್ ಗಾಗಿ ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರೂಪಾಯಿ ಜೊತೆಯಲ್ಲಿ ಈತನಿಗೆ 3000 ರೂಪಾಯಿ ಕೊಟ್ಟ ಉದ್ಯಮಿಗೆ ಇನ್ನೊಂದು ತಿಂಗಳು ಕಳೆದರೂ ಮರ ಇರುವ ಸ್ಥಳದ ನಕಾಶೆ ನೀಡಲು ಪುನಃ 30,000-00 ಡಿಮಾಂಡ್ ಇಟ್ಟಿದ್ದರು,


ಇದರಿಂದ ರೋಸಿ ಹೋದ ಸಂಬಂಧಪಟ್ಟ ನಾಗರಿಕರು ಕೊನೆಗೆ ಮಂಗಳೂರಿನ NECF ಸಂಘಟನೆಯ ಗಮನಕ್ಕೆ ತಂದರು.


ನಂತರ ಈ ವಿಚಾರವನ್ನು ಮಂಗಳೂರಿನ ACB ಇನ್ಸ್ಪೆಕ್ಟರ್ ಶ್ಯಾಮಸುಂದರ್ ಅವರ ಗಮನಕ್ಕೆ ತರಲಾಯಿತು.


ಸುಮಾರು ಮೂರು ದಿನಗಳ ಮುಂಜಾಗ್ರತಾ ಕಾರ್ಯಾಚರಣೆ ಮಾಡಿ ಮಂಗಳವಾರ 5-30 ರ ಹೊತ್ತಿಗೆ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಚೌಕಾಶಿ ಮಾಡಿ ಮಾಡಿ ಕೊನೆಗೆ 20,000-00 ರೂಪಾಯಿ ಲಂಚದ ಹಣ ತೆಗೆದು ಕೊಳ್ಳುವ ಸಮಯದಲ್ಲಿ ಸಾಕ್ಷಿ ಸಮೇತ ಸರ್ವೇಯರ್ ಗಂಗಾಧರ್ ಎಂಬ ಮಹಾ ಭ್ರಷ್ಟ ಅಧಿಕಾರಿಯನ್ನು ACB ತಂಡ ಬಂಧಿಸಿದೆ.


ಈ ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್‌ಪಿ ಪ್ರಕಾಶ್, ಇನ್ಸ್ಪೆಕ್ಟರ್ ಗಳಾದ ಶ್ಯಾಮಸುಂದರ್ ಮತ್ತು ಗುರುರಾಜ್, ಸಿಬಂಧಿಗಳಾದ- ಹರಿಪ್ರಸಾದ್, ರಾಧಾಕೃಷ್ಣ ಕೆ, ಗಂಗಣ್ಣ, ರಾಧಾಕೃಷ್ಣ, ಉಮೇಶ್, ಆದರ್ಶ, ರಾಕೇಶ್, ರಾಜೇಶ್, ಭರತ್, ಮೋಹನ್ ಸಾಲಿಯಾನ್ ಪಾಲ್ಗೊಂಡಿದ್ದರು,


ಸಾರ್ವಜನಿಕರಲ್ಲಿ ವಿನಂತಿ: ತಮ್ಮಲ್ಲಿ ಯಾರಾದರೂ ಲಂಚಕ್ಕಾಗಿ ಪೀಡಿಸಿದಲ್ಲಿ ಹೆದರದೇ ಕೂಡಲೇ ACB/ NECF ಸಂಪರ್ಕ ಮಾಡಿ..

Ads on article

Advertise in articles 1

advertising articles 2

Advertise under the article