ALLEN join hands with VIKAS | ಮಂಗಳೂರಿನಲ್ಲಿ ಎಲೆನ್ ಕೆರಿಯರ್ ಸಂಸ್ಥೆ: ಪ್ರತಿಷ್ಠಿತ ವಿಕಾಸ್ ಶಿಕ್ಷಣ ಸಂಸ್ಥೆ ಜೊತೆ ಒಪ್ಪಂದ
ವಿದ್ಯಾರ್ಥಿಗಳ ಪಾಲಿಗೆ ಹೊಸ ಆಶಾಕಿರಣ
ಸಹಭಾಗಿತ್ವ ಉದ್ಘಾಟಿಸಿದ ಡಾ. ಶಾಂತಾರಾಮ ಶೆಟ್ಟಿ
ಮಂಗಳೂರು: ಕರಾವಳಿ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿಕಾಸ್ ಶಿಕ್ಷಣ ಸಂಸ್ಥೆ ಇದೀಗ ರಾಜಸ್ತಾನ ಕೋಟದ ಎಲೆನ್ ಕೆರೀಯರ್ ಇನ್ಸ್ಟಿಟ್ಯುಟ್ ಜೊತೆ ಕೈಜೋಡಿಸಿದೆ. ಈ ಸಹಭಾಗಿತ್ವದ ಉದ್ಘಾಟನಾ ಸಮಾರಂಭ ಮಂಗಳೂರಿನ ಖಾಸಗಿ ಹೊಟೋಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
Watch This Video :
ಕಾರ್ಯಕ್ರಮವನ್ನು ನಿಟ್ಟೆ ವಿಶ್ವ ವಿದ್ಯಾನಿಲಯದ ಪ್ರೊ. ಚಾನ್ಸಲರ್ ಡಾ. ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಕರ್ನಾಟಕದ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆಯ ಗುರುತನ್ನು ಮೂಡಿಸಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆಗೆ ಸಾಕಷ್ಟು ಪ್ರಯೋಜನವಾಗಿದೆ ಎಂದು ಡಾ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡಬಾಕಾಗಿದೆ. ಈ ಮೂಲಕ ಅವರನ್ನು ದೇಶದ ಉತ್ತಮ ಪ್ರಜೆಗಳಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ ಎಂದು ಹೇಳಿದ ಅವರು, ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿಸಬೇಕು ಎಂದು ಹೇಳಿದರು.
ವಿಕಾಸ್ ಶಿಕ್ಷಣ ಸಂಸ್ಥೆಯು ಎಲೆನ್ ಸಂಸ್ಥೆಯೊಂದಿಗೆ ಕೈಜೋಡಿಸುವ ಮೂಲಕ ಕರಾವಳಿ ಭಾಗದ ವಿದ್ಯಾರ್ಥಿಗಳು ಐಐಟಿ, ಜೆಇಇ ಮತ್ತು ನೀಟ್ ನಂತಹ ಉನ್ನತ ಸ್ಥರದ ಪರೀಕ್ಷೆಗಳನ್ನು ಎದುರಿಸಲು ಸುಲಭ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿನಂತಿಸಿಕೊಂಡರು.
ಎಲೆನ್ ಕೆರಿಯರ್ ಇನ್ಸ್ಟಿಟ್ಯುಟ್ ಮುಖ್ಯಸ್ಥ ಶ್ರೀ ಪಂಕಜ್ ಅಗರ್‌ವಾಲ್ ಮಾತನಾಡಿ, ರಾಜಸ್ತಾನದ ಕೋಟ ಮೂಲದ ಎಲೆನ್ ಸಂಸ್ಥೆ ದೇಶಾದ್ಯಂತ ತನ್ನ ಸೆಂಟರ್‌ಗಳನ್ನು ಹೊಂದಿದೆ. ಮಂಗಳೂರಿನಲ್ಲಿ ತನ್ನ 41ನೇ ಕೇಂದ್ರವನ್ನು ವಿಕಾಸ್ ಸಂಸ್ಥೆಯ ಮೂಲಕ ಆರಂಭಿಸಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರಿಗೆ ಉತ್ತಮ ಹೆಸರು ಇದೆ. ಎಲೆನ್ ಸಂಸ್ಥೆ ದೇಶಾದ್ಯಂತ ತನ್ನ ಕೇಂದ್ರಗಳನ್ನು ಹೊಂದಿದ್ದು, ಇದೀಗ ಮಂಗಳೂರಿನಲ್ಲಿ ತನ್ನ 41 ನೇ ಕೇಂದ್ರವನ್ನು ವಿಕಾಸ ಶಿಕ್ಷಣ ಸಂಸ್ಥೆಗ ಮೂಲಕ ಸ್ಥಾಪಿಸುತ್ತಿದೆ. ಈ ಬಗ್ಗೆ ನಮಗೆ ಅತೀವ ಹೆಮ್ಮೆ ಇದೆ ಎಂದು ಅವರು ಹೇಳಿದರು.
2013ರ ವರೆಗೆ ಕೇವಲ ರಾಜಸ್ತಾನದ ಕೋಟದಲ್ಲಿ ಮಾತ್ರ ಇದ್ದ ಎಲೆನ್ ಇದೀಗ ದೇಶದ ವಿವಿಧೆಡೆ ತನ್ನ ಸೇವಾ ಕಾರ್ಯವನ್ನು ವಿಸ್ತರಿಸಿದೆ. ಜೈಪುರ, ಬೆಂಗಳೂರು, ಪಾಂಡಿಚೇರಿ, ಕೊಚ್ಚಿನ ಮೊದಲಾದ ಕಡೆಗಳಲ್ಲಿ ಎಲೆನ್ ಸಂಸ್ಥೆ ತನ್ನ ಕೇಂದ್ರಗಳನ್ನು ಆರಂಭಿಸಿ ಅಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಐಐಟಿ, ಜೆಇಇ ಸೇರಿದಂತೆ ಹೆಚ್ಚಿನ ಪ್ರಥಮ ಶ್ರೇಯಾಂಕಗಳನ್ನು ಎಲೆನ್ ತನ್ನದಾಗಿಸುತ್ತಿರುವುದು ಅದರ ಶ್ರೇಷ್ಟತೆಗೆ ಮತ್ತೊಂದು ಸಾಕ್ಷಿಯಾಗಿದೆ. ಸಂಸ್ಕಾರ್ ಸೆ ಸಫಲತಾ ತಕ್ ಎಂಬ ಧ್ಯೇಯ ವಾಕ್ಯದೊಂದಿಗೆ ಸಂಸ್ಥೆ ಮುನ್ನಡೆಯುತ್ತಿದೆ ಎಂದು ಪಂಕಜ್ ಅಗರ್ವಾಲ್ ತಿಳಿಸಿದರು.
ಎಲೆನ್ ಸೌತ್ ಇಂಡಿಯಾ ಅಕಾಡಮಿಕ್ ಮುಖ್ಯಸ್ಥ ಮಹೇಶ್ ಯಾದವ್ ಮಾತನಾಡಿ ಎಲೆನ್ ಸಂಸ್ಥೆ ದೇಶವ್ಯಾಪಿ ಜನಮೆಚ್ಚುಗೆ ಗಳಿಸಿದ್ದು, ಪ್ರತಿ ಕೇಂದ್ರದಲ್ಲೂ ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ಮಂಗಳೂರಿನಲ್ಲಿ ಇದು ಮುಂದುವರಿಯಲಿದೆ ಎಂದು ಭವಿಷ್ಯ ನುಡಿದರು.
ವಿಕಾಸ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ವಿಕಾಸ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಇದೀಗ ಎಲೆನ್ ಸಂಸ್ಥೆ ಜೊತೆಗೆ ಕೈ ಜೋಡಿಸಿದ್ದು, ಈ ಮೂಲಕ ಐಐಟಿ ನೀಟ್ ನಂತಹ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ತೋರಬೇಕು ಎಂಬುದೇ ನಮ್ಮ ಹೆಬ್ಬಯಕೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಪಾಲೇಮಾರ್ ತನಗೆ ಶಿಕ್ಷಣ ನೀಡಿದ ಗುರುಗಳಾದ ಚಂದ್ರ ಶೇಖರ್, ವಿಕಾಸ ಸಂಸ್ಥೆಯ ಬೆಳವಣಿಗೆಯಲ್ಲಿ ಶ್ರಮಿಸಿದ ಉಪನ್ಯಾಸಕರಾದ ರಾಜೇಂದ್ರನ್ ಮತ್ತು ಶ್ರೀಪತಿ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಎಲೆನ್ ಕೆರಿಯರ್ ಇನ್ಸ್ಟಿಟ್ಯುಟ್ನ ಮಂಗಳೂರು ವಿಭಾಗ ಮುಖ್ಯಸ್ಥ ವಿಪಿನ್ ನಾರಾಯಣ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ವಿಕಾಸ ಸಂಸ್ಥೆಯ ಕಾರ್ಯದರ್ಶಿ ಜೆ.ಕೆ. ರಾವ್ ಧನ್ಯವಾದ ಸಮರ್ಪಿಸಿದರು.