-->
Bajarangadal distance with accused | ದೇವಾಲಯದ ಹುಂಡಿ ಕಳ್ಳ ತಾರಾನಾಥನಿಗೂ ಬಜರಂಗದಳಕ್ಕೂ ಸಂಬಂಧವಿಲ್ಲ: ಪುನೀತ್ ಕೊಟ್ಟಾರಿ ಸ್ಪಷ್ಟನೆ

Bajarangadal distance with accused | ದೇವಾಲಯದ ಹುಂಡಿ ಕಳ್ಳ ತಾರಾನಾಥನಿಗೂ ಬಜರಂಗದಳಕ್ಕೂ ಸಂಬಂಧವಿಲ್ಲ: ಪುನೀತ್ ಕೊಟ್ಟಾರಿ ಸ್ಪಷ್ಟನೆ


Accused Tharanath Mohan


ಮಂಗಳೂರು: ಬಜರಂಗದಳದ ನಾಯಕ ಹಾಗೂ ಉಳ್ಳಾಲ ಘಟಕದ ಸಂಚಾಲಕನಾದ ತಾರನಾಥ್ ಮೋಹನ್ ಬಂಧನ ಹೊಸ ತಿರುವು ಪಡೆದುಕೊಂಡಿದೆ. ಈತನ ಜೊತೆ ಸಂಘಟನೆಗೆ ಯಾವುದೇ ಸಂಬಂಧ ಇಲ್ಲ. ಆತ ಭಜರಂಗ ದಳದ ಸದಸ್ಯನೇ ಅಲ್ಲ ಎಂದು ಭಜರಂಗದಳದ ಜಿಲ್ಲಾ ಘಟಕದ ಪ್ರಮುಖ ಪುನೀತ್ ಕೊಟ್ಟಾರಿ ಸ್ಪಷ್ಟಪಡಿಸಿದ್ದಾರೆ.


Puneeth Attavara, Bajaranga Dal Leader


ಹೌದು, ಈತ ಭಜರಂಗ ದಳದ ಉಳ್ಳಾಲ ಘಟಕದ ಸಂಚಾಲಕನಾಗಿದ್ದ. ಶಾರದಾ ನಗರ ಮೊಂಟೆಪದವು ಘಟಕದ ಉದ್ಘಾಟನೆ ಸಂದರ್ಭದಲ್ಲಿ ಆತನಿಗೆ ಸಂಘಟನೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ, ಆತ ಹಲವಾರು ಅಪರಾಧ ಪ್ರಕರಣಗಳಲ್ಲಿ ಆರೋಪಿತನಾಗಿರುವ ಹಿನ್ನೆಲೆಯಲ್ಲಿ ಆತನನ್ನು ಕಳೆದ ಡಿಸೆಂಬರ್ 2020ರ ವೇಳೆ ಸಂಘಟನೆಯಿಂದ ಉಚ್ಚಾಟಿಸಲಾಗಿದೆ ಎಂದು ಪುನೀತ್ ಕೊಟ್ಟಾರಿ ಸ್ಪಷ್ಟಪಡಿಸಿದ್ದಾರೆ.


ಕೊಣಾಜೆ ಪೊಲೀಸರು ಹಿಂದೂ ಸಂಘಟನೆಯ ನಾಯಕನಾಗಿದ್ದ ತಾರಾನಾಥ ಮೋಹನ್‌ನನ್ನು ದೇವಸ್ಥಾನದ ಹುಂಡಿ ಕಳವು ಹಾಗೂ ದ್ವಿಚಕ್ರ ವಾಹನಗಳ ಸರಣಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.


ಕಳೆದ ಮಾರ್ಚ್ 6ರಂದು ರಾತ್ರಿ ಆರೋಪಿ ತಾರಾನಾಥ ದ್ವಿಚಕ್ರ ವಾಹನ ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮತ್ತು ಸಿಸಿಟಿವಿ ಕ್ಯಾಮರಾದ ಮಾಲಕರು ದೃಶ್ಯಾವಳಿಯನ್ನು ವೀಕ್ಷಿಸಿ ತಾರಾನಾಥನ ಗುರುತು ಪತ್ತೆ ಹಚ್ಚಿದ್ದರು.

Ads on article

Advertise in articles 1

advertising articles 2

Advertise under the article