Tamil Nadu- Kamal entering poll politics | ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಮಲಹಾಸನ್ ಚುನಾವಣಾ ಕಣಕ್ಕೆ
Sunday, March 14, 2021
ಟಾರ್ಚ್ ಲೈಟ್ ಹಿಡಿದ ಹಿರಿಯ ನಟ ಕಮಲ್ ಹಾಸನ್ ತನ್ನ ಮಕ್ಕಳ್ ನೀತಿ ಮಾಯಮ್ ಪಕ್ಷದಿಂದ ಈ ಬಾರಿ ಚುನಾವಣೆಯನ್ನು ಎದುರಿಸಲಿದ್ದಾರೆ. ಅವರು ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ.
ಅವರು ಅಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಜೊತೆ ಸ್ಪರ್ಧೆ ನಡೆಸಲಿದ್ದಾರೆ.
ಇಲ್ಲಿ ಡಿಎಂಕೆಯಾಗಲೀ ಅಣ್ಣಾ ಡಿಎಂಕೆಯಾಗಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಇದು ಸ್ಟಾರ್ ನಟ ಕಮಲ್ ಅವರಿಗೆ ವರದಾನ ಆಗಲಿದೆ ಎಂದು ಆ ಪಕ್ಷದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ಬಳಿಕ ಈ ಕ್ಷೇತ್ರದಲ್ಲಿ ಕಮಲ್ ಪಕ್ಷ ಸಂಘಟನಾತ್ಮಕವಾಗಿ ಬಲಿಷ್ಟವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತ ದೊರೆತಿರುವುದು, ಈ ಬಾರಿ ಮತ್ತಷ್ಟು ಜನಬೆಂಬಲ ಲಭ್ಯವಾಗುವ ಸಾಧ್ಯತೆ ನಿಚ್ಚಳ ಎನ್ನುತ್ತಾರೆ ಸ್ಥಳೀಯ ನಾಯಕರು.