Maha records highest Covid case in a day | ಕೊರೋನಾ ಸೋಂಕಿನಲ್ಲಿ ಮಹಾರಾಷ್ಟ್ರ ದಾಖಲೆಯಲ್ಲಿ ಏರಿಕೆ: ಬೀಡ್ ಜಿಲ್ಲೆ ಲಾಕ್‌ಡೌನ್
Thursday, March 25, 2021
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಮಕಿಗೆ ಒಳಗಾದವರ ಸಂಖ್ಯೆ 31,855 ದಾಖಲಾಗಿದೆ.
2020ರಲ್ಲಿ ಭಾರತಕ್ಕೆ ಕೊರೋನಾ ಪ್ರವೇಶ ಮಾಡಿದ ನಂತರ ಮಹಾರಾಷ್ಟ್ರದಲ್ಲಿ ಒಂದೇ ದಿನ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸೋಂಕು ತಗುಲಿದ್ದು ಇದೇ ಮೊದಲು.
ಸೋಂಕಿತರ ಪೈಕಿ ಮುಂಬೈ ಅತಿ ಹೆಚ್ಚು ಬಾಧಿತವಾಗಿದೆ. ದೇಶದ ಆರ್ಥಿಕ ರಾಜಧಾನಿಯಲ್ಲಿ ಐದು ಸಾವಿರ ಸೋಂಕಿತರು ಕಂಡುಬಂದಿದ್ದಾರೆ.
ಇದುವರೆಗೆ ಮಹಾರಾಷ್ಟ್ರದಲ್ಲಿ 25.64 ಲಕ್ಷ ಮಂದಿಗೆ ಕೊರೋನಾ ಕಂಡುಬಂದಿದ್ದು, ಈ ಪೈಕಿ ಎರಡೂವರೆ ಲಕ್ಷ ಮಂದಿ ಸಕ್ರಿಯ ಸೋಂಕಿನಿಂದ ಅಸ್ವಸ್ಥರಾಗಿದ್ದಾರೆ.
ಬೀಡ್ ಜಿಲ್ಲೆಯಲ್ಲಿ ಮಾರ್ಚ್ 26ರಿಂದ ಎಪ್ರಿಲ್ 4ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ ಮದುವೆ ಹಾಲ್, ಹೊಟೇಲ್, ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗುತ್ತದೆ.