-->
Yenepoya Medical College Workshop | ಯೆನೆಪೋಯಾ ವೈದ್ಯಕೀಯ ಕಾಲೇಜಿನಿಂದ ರಾಷ್ಟ್ರೀಯ ಕಾರ್ಯಾಗಾರ

Yenepoya Medical College Workshop | ಯೆನೆಪೋಯಾ ವೈದ್ಯಕೀಯ ಕಾಲೇಜಿನಿಂದ ರಾಷ್ಟ್ರೀಯ ಕಾರ್ಯಾಗಾರ




ಯೇನೆಪೋಯ ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ಹಾಗೂ ವಿಷ ವಿಜ್ಞಾನಶಾಸ್ತ್ರ ವಿಭಾಗದ ವಿಧಿ ವಿಜ್ಞಾನ ಮಾನವ ಶಾಸ್ತ್ರ ಘಟಕದ ಆಶ್ರಯದಲ್ಲಿ “ವೈದ್ಯಕೀಯ – ಕಾನೂನು ಚೌಕಟ್ಟಿನಲ್ಲಿ ಹೂತ ಶವವನ್ನು ಹೊರ ತೆಗೆಯುವುದು ಮತ್ತು ಮೂಳೆಗಳ ಗುರುತಿಸುವಿಕೆ” ವಿಷಯದಲ್ಲಿ 2021 ಮಾರ್ಚ್ 4 ರಂದು ಒಂದು ದಿನದ ರಾಷ್ಟ್ರೀಯ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ವಿಧಿ ವಿಜ್ಞಾನ ಶಾಸ್ತ್ರ ವಿಭಾಗ. ದಂತ ವೈದ್ಯಶಾಸ್ತ್ರ. ಶರೀರ ಅಂಗರಚನಾ ಶಾಸ್ತ್ರ ಮುಂತಾದ ವಿಭಾಗಗಳ 35 ಪ್ರತಿನಿಧಿಗಳು ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.


ಚಂಡಿಗರ್ ನ ಪಂಜಾಬ್ ವಿಶ್ವವಿದ್ಯಾನಿಲಯದ ಪ್ರಸಿದ್ದ ವಿಧಿ ವಿಜ್ಞಾನ ಮಾನವ ಶಾಸ್ತ್ರಜ್ಞ ರಾದ ಡಾ.ಜೆ. ಯೆಸ್. ಸೆಹ್ರಾವತ್ ತರಬೇತಿ ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಅವರು ಇತ್ತೀಚಿದ ವರ್ಷಗಳಲ್ಲಿಪ್ರಗತಿ ಹೊಂದಿದ ವಿಧಿ ವಿಜ್ಞಾನ ಮಾನವ ಶಾಸ್ತ್ರ ಮತ್ತು ತಂತ್ರಗಳ ಬಗ್ಗೆ ವಿದ್ವತ್ ಪೂರ್ಣ ವಿಷಯಗಳನ್ನು ಮಂಡಿಸಿದರು. ತಮ್ಮ ಅನುಭವಗಳನ್ನು ವಿವರಿಸುತ್ತಾ ಅಜ್ನಾಲಾದ ಅಸ್ತಿಪಂಜರದ ಅವಶೇಷಗಳ ಹೊರ ತೆಗೆಯುವಿಕೆ ಮತ್ತು ಜೈವಿಕ ವ್ಯಕ್ತಿಚಿತ್ರಣದ ಉಲ್ಲೇಖದೊಂದಿಗೆ ಅವರು ತಮ್ಮ ಜ್ಞಾನ ಮತ್ತು ಅನುಭವಗಳನ್ನು ಹಂಚಿಕೊಂಡರು.


ಈ ಸಂದರ್ಭದಲ್ಲಿ ತರಬೇತಿಯಲ್ಲಿ ಭಾಗಹಿಸಿದ ಪ್ರತಿನಿಧಿಗಳಿಗೆ ಪ್ರತ್ಯಕ್ಷ ಅನುಭವ ಮತ್ತು ಕೌಶಲ್ಯವನ್ನು ನೀಡಲು ಮಂಗಳೂರಿನ ದೇರಳಕಟ್ಟೆಯ ಯೇನೆಪೋಯ (ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾನಿಲಯ) ಆವರಣದಲ್ಲಿ ಸಂಪನ್ಮೂಲ ವ್ಯಕ್ತಿಗಳ ಸಮ್ಮುಖದಲ್ಲಿ ಹಾಗೂ ವಿಧಿ ವಿಜ್ಞಾನ ಮತ್ತು ವಿಷ ವಿಜ್ಞಾನಶಾಸ್ತ್ರ (ಎಫ್.ಎಂ. ಟಿ) ಪ್ರಾಧ್ಯಾಪಕರುಗಳ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಗುಂಡಿಯಿಂದ ಅಸ್ತಿಪಂಜರದ ಅವಶೇಷಗಳನ್ನು ಅಗೆದು ಹೊರತೆಗೆದು ಅವುಗಳ ಜೈವಿಕ ವ್ಯಕ್ತಿ ಪರಿಚಯವನ್ನು ಅಭಿವೃದ್ಢಿಪಡಿಸಲಾಯಿತು. ಪ್ರಾನ್ಸ್ ದೇಶದ ಪ್ಯಾರಿಸ್ ನ ಇ.ಎ.ಎ.ಎಪ್ ನ ವಿಧಿ ವಿಜ್ಞಾನ ಮಾನವ ಶಾಸ್ತ್ರಜ್ಞರಾದ ಡಾ. ಟನಿಯ ಡೆಲಾ ಬರ್ದ್ ಅಪರಿಚಿತ ಮಾನವ ಅವಶೇಷಗಳ ತನಿಖೆಯಲ್ಲಿ ಮಾನವ ಶಾಸ್ತ್ರೀಯ ತನಿಖೆಯ ಮಹತ್ವ ಬಗ್ಗೆ ಆನ್ಲೈನ್ ಉಪನ್ಯಾಸ ನೀಡಿದರು.








ಯೇನೆಪೋಯ ನೀತಿಶಾಸ್ತ್ರ ಕೇಂದ್ರದ ನಿರ್ದೇಶಕರಾದ ಪ್ರೊಫೆಸರ್ ವೀಣಾ ವಾಸ್ವಾನಿ , ವಿಧಿ ವಿಜ್ಞಾನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕಿಶೋರ್ ಕುಮಾರ್, ವಿಧಿ ವಿಜ್ಞಾನ ಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಡಿಪ್ಲೊಮಾ ಕಾರ್ಯಕ್ರಮದ ಸಂಯೋಜಕಿ ಡಾ. ಲೀನಾ ಪ್ರಮೋದ್ ಮತು ಯೇನೆಪೋಯ ವೈಧ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ಶಾಸ್ತ್ರಘಟಕದ ಡಾ. ನಾಸಿರ್ ಈ ಉಪಯುಕ್ತ ಅಭ್ಯಾಸ ಆಧಾರಿತ ಕಾರ್ಯಗಾರವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಆರು ವರ್ಷಗಳಿಂದ ಡಾ. ಲೂಯಿಸ್ ಬ್ರೈಡರ್ ನೇತೃತ್ವದಲ್ಲಿಅರ್ಜೆಂಟಿನಾ ದ ಈಕ್ವಿಪೀ ಅರ್ಜೆಂಟಿನಾ ದ ಆಂಥ್ರೆಪಾಲಜಿ ಫೆರೆನ್ಸ್( ಇ.ಎ.ಎ. ಎಫ್) ನ ಸಕ್ರಿಯ ಸಹಭಾಗಿತ್ವದಲ್ಲಿ ಯೇನೆಪೋಯ ಮೆಡಿಕಲ್ ಕಾಲೇಜಿನ ವಿಧಿವಿಜ್ಞಾನ ಶಾಸ್ತ್ರ ವಿಭಾಗವು ವಿಧಿವಿಜ್ಞಾನ ಮಾನವಶಾಸ್ತ್ರ ಮತ್ತು ಒಡೊಂಟಾಲಜಿಯಲ್ಲಿ ವಿಶಿಷ್ಟತೆಯಿಂದ ಕೂಡಿದ ಸ್ನಾತ್ತಕೋತ್ತರ ಡಿಪ್ಲೊಮಾವನ್ನು ನೀಡುತ್ತಿದೆ. 

Ads on article

Advertise in articles 1

advertising articles 2

Advertise under the article