![vaccine to advocates in Mangaluru | 45 ವರ್ಷಕ್ಕೂ ಮೇಲ್ಪಟ್ಟ ವಕೀಲರಿಗೆ ಉಚಿತ ಕೋವಿಡ್ ಲಸಿಕೆ vaccine to advocates in Mangaluru | 45 ವರ್ಷಕ್ಕೂ ಮೇಲ್ಪಟ್ಟ ವಕೀಲರಿಗೆ ಉಚಿತ ಕೋವಿಡ್ ಲಸಿಕೆ](https://i.ytimg.com/vi/lItc9sPoMZc/hqdefault.jpg)
vaccine to advocates in Mangaluru | 45 ವರ್ಷಕ್ಕೂ ಮೇಲ್ಪಟ್ಟ ವಕೀಲರಿಗೆ ಉಚಿತ ಕೋವಿಡ್ ಲಸಿಕೆ
Saturday, April 3, 2021
45 ವರ್ಷಕ್ಕೂ ಮೇಲ್ಪಟ್ಟ ವಕೀಲರಿಗೆ ಉಚಿತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ವ್ಯವಸ್ಥೇ ಮಾಡಲಾಗಿದೆ.
ಸಂಘದ ಮನವಿಯಂತೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಮುರಳೀಧರ ಪೈ ಅವರು ನ್ಯಾಯಾಲಯ ಸಂಕೀರ್ಣದಲ್ಲಿ ಈ ವ್ಯವಸ್ಥೆ ಮಾಡಿರುವುದಾಗಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ ತಿಳಿಸಿದ್ದಾರೆ.
ಬುಧವಾರ ಮತ್ತು ಗುರುವಾರ ನ್ಯಾಯಾಲಯ ಸಂಕೀರ್ಣದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ವಕೀಲರು ತಮ್ಮ ಗುರುತು ಚೀಟಿ ನೀಡಿ ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ವಕೀಲರ ಸಂಘದ ಪ್ರಕಟಣೆ ತಿಳಿಸಿದೆ.