Sack Minister Kathi-dyfi demands | "ಪಡಿತರ ಕೇಳಿದ ಜನರಿಗೆ ಸಾಯಲು ಹೇಳಿದ ದುಷ್ಠ ಸಚಿವ ಕತ್ತಿ ಅಧಿಕಾರದಿಂದ ತೊಲಗಲಿ"
ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ವೈಫಲ್ಯ ಕಂಡಿರುವ ರಾಜ್ಯ ಸರಕಾರ ಕನಿಷ್ಠಪಕ್ಷ ರಾಜ್ಯದ ಜನತೆಗೆ ಆಹಾರ ಹಾಗೂ ಆರೋಗ್ಯ ಖಾತ್ರಿಪಡಸದೇ ಲಾಕ್ಡೌನ್ ಹೇರಿ ಸಂಕಷ್ಟಕ್ಕೆ ದೂಡಿದೆಯಲ್ಲದೇ ಪಡಿತರ ಕಡಿತ ಮಾಡಿರುವುದನ್ನು ಪ್ರಶ್ನಿಸಿದ ಜನರಿಗೆ 'ಸತ್ತುಹೋಗಿ' ಎಂದು ಹೇಳಿ ಸಮರ್ಥಿಸಿಕೊಂಡಿರುವ ಸರಕಾರದ ಆಹಾರ ಮಂತ್ರಿ ಉಮೇಶ್ ಕತ್ತಿ ನಡವಳಿಕೆ ಅಕ್ಷ್ಯಮ್ಯವಾದುದು. ಡಿವೈಎಫ್ಐ ಬಿಜೆಪಿ ಸರಕಾರದ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ಕೂಡಲೇ ಮುಖ್ಯಮಂತ್ರಿಗಳು ಕತ್ತಿಯಿಂದ ರಾಜೀನಾಮೆ ಪಡೆದು ಮಂತ್ರಿ ಮಂಡಲದಿಂದ ಕಿತ್ತು ಹಾಕಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿ ಒತ್ತಾಯಿಸಿದೆ.
ಹಿಂದಿನ ಸರಕಾರ ವಿತರಿಸುತ್ತಿದ್ದ ಪಡಿತರವನ್ನು ಈಗಿನ ಬಿಜೆಪಿ ಸರಕಾರ ಇಂತಹ ಕೊರೊನಾದಂತ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಜನರಿಗೆ ಪಡಿತರ ಕಡಿತಗೊಳಿಸಿ ಜನಸಾಮಾನ್ಯರ ಮೇಲೆ ಕ್ರೌರ್ಯ ಮೆರೆಯುತ್ತಿರುವುದು ಖಂಡನೀಯವಾದುದು.
ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಈಗಿರುವ ಪಡಿತರ ವಿತರಣೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ ಜನ ಸಾಮಾನ್ಯರಿಗೆ ಆಸರೆಯಾಗುವ ಬದಲಿಗೆ ಕಡಿತೊಳಿಸಿ ಜನವಿರೋಧಿತನವನ್ನು ಸಾಬೀತುಗೊಳಿಸಿದೆ.
ಈ ಬಿಜೆಪಿ ಆಡಳಿತದ ಪರಿಣಾಮವಾಗಿ ದೇಶ ಹಾಗೂ ರಾಜ್ಯವು ಹಸಿವಿನ ಸೂಚ್ಯಂಕದಲ್ಲಿ ಹಿನ್ನಡೆ ಕಾಣುತ್ತಿದ್ದೆಯಲ್ಲದೆ ಹಸಿವಿನ ಸಾವು ಹೆಚ್ವುತ್ತಿದೆ. ಈಗಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿರುವ ಕ್ಲಿಷ್ಟಕರ ಸಂದರ್ಭದಲ್ಲಿ ಸಚಿವರ ದಾಷ್ಟ್ಯತನದ ಹೇಳಿಕೆಗೆ ಮುಖ್ಯಮಂತ್ರಿ ಕೇವಲ ವಿಷಾದ ವ್ಯಕ್ತಪಡಿಸದೇ ಅವರ ರಾಜೀನಾಮೆಯನ್ನು ಪಡೆಯಬೇಕು.
ಅಲ್ಲದೇ ಲಾಕ್ಡೌನ್ ಸಂದರ್ಭದಲ್ಲಿ ಈಗಿರುವ ಪಡಿತರ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಹಿಂದಿನ ರೀತಿಯಲ್ಲಿ ಕನಿಷ್ಠ ಒಬ್ಬರಿಗೆ 7. ಕೆ.ಜಿ ಅಕ್ಕಿ, ಗೋಧಿ, ಸಕ್ಕರೆ ಹಾಗೂ ಅವಶ್ಯಕ ಪಡಿತರ ವಸ್ತುಗಳನ್ನು ಉಚಿತವಾಗಿ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ಐ ರಾಜ್ಯ ಸಮಿತಿಯು ಆಗ್ರಹಿಸಿದೆ.